ಮಹಿಳೆ ಮೇಲೆ ರೌಡಿಶೀಟ್​ನಿಂದ ಹಲ್ಲೆ?

Published on

ಬಿಡದಿ: ಸಮೀಪದ ತಾಯಪ್ಪನದೊಡ್ಡಿಯಲ್ಲಿ ಜಮೀನು ಸಂಬಂಧಿತ ಗಲಾಟೆಯಲ್ಲಿ ಪೊಲೀಸರ ಮುಂದೆಯೇ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ರೌಡಿಶೀಟರ್​ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಭೂಸ್ವಾಧಿನ ವಿಚಾರವಾಗಿ ಜಂಟಿ ಅಳತೆ ಪ್ರಮಾಣ ಪತ್ರದ (ಜೆಎಂಸಿ) ಅಧಿಕಾರಿಗಳು ತಾಯಪ್ಪನದೊಡ್ಡಿಯಲ್ಲಿನ ಮಾದಮ್ಮ ಅವರ ಜಮೀನು ಸರ್ವೇಗೆ ಪೊಲೀಸರೊಂದಿಗೆ ಬಂದಿದ್ದರು. ಇದೇ ವೇಳೆ ರೌಡಿಶೀಟರ್​ ಮೊಗಪ್ಪ ಹಾಗೂ ಅವರ ಕುಟುಂಬದವರು ಜಮೀನು ನಮಗೆ ಸೇರಿದ್ದು ಎಂದು ಗಲಾಟೆ ತೆಗೆದು ಮಾದಮ್ಮ ಅವರ ಸೊಸೆ ಸುಮಿತ್ರಮ್ಮ ಹಾಗೂ ಪತಿ ಮಹದೇವಯ್ಯ ಮೇಲೆ ಕರಿಯಪ್ಪ, ದೇವಿರಮ್ಮ, ಮೊಗಪ್ಪ, ವಿಶ್ವನಾಥ ಅವರೊಂದಿಗೆ ಸೇರಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಸುಮಿತ್ರಾ ಬಿಡದಿ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net