ಸಿಲ್ಕ್​, ಮಿಲ್ಕ ಇರದಿದ್ದರೆ ಬರಿದಾಗುತ್ತಿತ್ತು ಬದುಕು

hrhl
Published on

ಹಾರೋಹಳ್ಳಿ: ಜಿಲ್ಲೆಯಲ್ಲಿ ಹಾಲು, ರೇಷ್ಮೆ, ತೆಂಗು ಸೇರಿ ಇತರ ಬೆಳೆಗಳೇ ರೈತರ ಜೀವನಾಡಿಯಾಗಿದ್ದು, ಸಿಲ್ಕ್​, ಮಿಲ್ಕ ಇರದಿದ್ದರೆ ರೈತರ ಬದುಕು ಹೇಳತೀರದಾಗಿರುತಿತ್ತು. ರೈತರು ಆದಾಯಗಳಿಕೆಗೆ ಈ ದಾರಿ ಕಂಡುಕೊಂಡಿದ್ದಾರೆ. ಅವರಿಗೆ ಪೂರಕವಾಗಿ ಅಧಿಕಾರ ನಡೆಸಲು ಕಾರ್ಯಕರ್ತರು ಪಕ್ಷ ಸಂಟಿಸಬೇಕು ಎಂದು ಶಾಸಕ ಇಕ್ಬಾಲ್​ ಹುಸೇನ್​ ಹೇಳಿದರು.

ತಾಲೂಕಿನ ಕೊಳ್ಳಿಗನಹಳ್ಳಿ ಗ್ರಾಪಂನಲ್ಲಿ ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿದ್ದ ರೈತರಿಗೆ ಕೃಷಿ ಪರಿಕರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಸೆಂಬರ್​ನಲ್ಲಿ ತಾಪಂ ಹಾಗೂ ಜಿಪಂ ಚುನಾವಣೆ ೂಷಣೆ ಆಗುವ ಸಂಭವವಿದ್ದು, ಈ ಬಗ್ಗೆ ಕಾರ್ಯಕರ್ತರು ಸಿದ್ಧರಾಗಬೇಕು. ಸ್ಥಳಿಯ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುವುದರಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು.

ವಿಧಾನಸಭಾ ೇತ್ರದಲ್ಲಿ 25 ಅಂಬೇಡ್ಕರ್​ ಭವನ ನಿರ್ಮಾಣವಾಗಲಿವೆ. ನಾಲ್ಕು ಕೆಪಿಎಸ್​ ಶಾಲೆಗಳು ಮಂಜೂರಾಗಿದ್ದು, ಕೊಳ್ಳಿಗನಹಳ್ಳಿ ಹಾಗೂ ಎಲಚವಾಡಿ ಗ್ರಾಪಂ ವ್ಯಾಪ್ತಿಯಲ್ಲೂ ಎರಡು ಸುಸಜ್ಜಿತ ಹೈಟೆಕ್​ ಶಾಲೆಗಳ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ರೈತರಿಗೆ ಆರ್ಥಿಕ ಶಕ್ತಿ ತುಂಬಲು ಸರ್ಕಾರ ಹಲವು ರೀತಿಯ ಕ್ರಮ ಕೈಗೊಳ್ಳುತ್ತಿದ್ದು, ಹಾಲಿನ ಸ್ವ ಉದ್ಯೋಗ ಕೈಗೊಂಡು ಸ್ವಂತ ದುಡಿಮೆಯಲ್ಲಿ ತೊಡಗಿಕೊಳ್ಳಬೇಕೆಂದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮುನೇಗೌಡ ಮಾತನಾಡಿ, ಜಿಲ್ಲೆಯಲ್ಲಿ ತೆಂಗು ಬೆಳೆಗೆ ನುಸಿ ರೋಗ, ಕೀಟಬಾಧೆ ಸೇರಿ ಹಲವು ರೋಗಗಳು ಹರಡಿದ್ದು, ರೋಗ ಹರಡುವಿಕೆ ತಡೆಯಲು, ಬೆಳೆಯ ಫಲವತ್ತತೆ ಹೆಚ್ಚಿಸಲು ತೆಂಗು ಅಭಿವೃದ್ಧಿ ಮಂಡಳಿಯಿಂದ ರೈತರಿಗೆ ಒಂದು ಹೆಕ್ಟೇರ್​ಗೆ 17 ಸಾವಿರ ರೂ. ಮೌಲ್ಯದ ಗೊಬ್ಬರ, ಔಷಧ ಸೇರಿ ಎಂಟು ಬಗೆಯ ವೈಾನಿಕ ರಸಗೊಬ್ಬರ ನೀಡಲಾಗುತ್ತಿದೆ. ಇದರಿಂದ ಇಳುವರಿ ಹೆಚ್ಚಾಗುತ್ತದೆ ಎಂದರು.

ಕೆಲ ರೈತರು ನಮಗೆ ರಸಗೊಬ್ಬರ ನೀಡದೆ ತಾರತಮ್ಯ ಮಾಡಿದ್ದಾರೆ ಎಂದು ದೂರು ನೀಡಿದ್ದು, ಎಲ್ಲ ತೆಂಗು ಬೆಳೆಗಾರರಿಗೂ ಅವಕಾಶದ ಜತೆಗೆ ಸೌಲಭ್ಯಗಳನ್ನು ವಿಸ್ತರಿಸಲಾಗುವುದು ಎಂದರು.

ಅಧಿಕಾರಿಗಳು ನಮಗೆ ರಸಗೊಬ್ಬರ ನೀಡದೆ ತಾರತಮ್ಯ ಮಾಡಿದ್ದಾರೆ. ನಾವು ಮನವಿ ಮಾಡಿದರೂ ಈ ಬಗ್ಗೆ ಬೇಜವಾಬ್ದಾರಿ ತೋರಿದ್ದಾರೆ ಎಂದು ರೈತರು ಶಾಸಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿ ಪ್ರಕಾಶ್​, ಪಿಡಿಒ ಸಿದ್ದಮುಗಿಲೇಗೌಡ, ವಿಎಸ್ಸೆಸ್ಸೆನ್​ ಅಧ್ಯ ರವಿ ಕಡಸಿಕೊಪ್ಪ, ಮುಖಂಡರಾದ ನಂಜೇಗೌಡ, ದಿನೇಶ್​, ವಿಜಯಕುಮಾರ್​, ಈರೇಗೌಡ, ವೆಂಕಟೇಶ್​, ರಾಜು, ಕೆ.ಪಿ.ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net