ಪತ್ನಿ,ಪುತ್ರನ ಸಮೇತ ನಂಜನಗೂಡು ಶ್ರೀ ಕಂಠೇಶ್ವರನ ದರ್ಶನ ಪಡೆದ ಯದುವೀರ್

Yaduveera
Published on

ಮೈಸೂರು: ಕುಟುಂಬ ಸಮೇತ ನಂಜುಂಡೇಶ್ವರನಿಗೆ ಯದುವೀರ್​ ಒಡೆಯರ್​ ಪೂಜೆ ಸಲ್ಲಿಸಿದರು.ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್, ಪತ್ನಿ ರಿಷಿಕಾ ಯದುವೀರ್ ಹಾಗೂ ಪುತ್ರ ಆದ್ಯವೀರ್ ಜೊತೆ ಆಗಮಿಸಿ ನಂಜುಂಡನ ದರ್ಶನ ಪಡೆದರು.

ದೇವಾಲಯದ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಅದ್ಧೂರಿ ಗೌರವ ಸಮರ್ಪಿಸಲಾಯಿತು. ಪೂಜೆ ಸಂದರ್ಭದಲ್ಲಿ ಶ್ರೀಕಂಠೇಶ್ವರನ ಗರ್ಭಗುಡಿ ಮುಂದೆ ಕುಳಿತ ಕುಟುಂಬ ರಾಜ್ಯದ ಒಳಿತಿಗಾಗಿ ಪ್ರಾರ್ಥನೆ ಮಾಡಿದರು.

ಕುಟುಂಬ ಸಮೇತ ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿದ ಯಧುವೀರ್ ಒಡೆಯರ್​ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿದ್ದು ಅನ್ನದಾತನಿಗೆ ಶುಭ ಕೋರಿ ಪೂಜೆ ಸಲ್ಲಿಸಲಾಗಿದೆ ಎಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net