

ಕೇಪ್ಟೌನ್: ಕಾಡು ಪ್ರಾಣಿಗಳೆಂದರೆ ಭಯಾನಕ, ಮನುಷ್ಯನನ್ನೇ ತಿಂದು ಹಾಕುವ ಪ್ರಾಣಿಗಳಿಂದ ಮನುಷ್ಯ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. ಅದರಲ್ಲೂ ಸಿಂಹ ಅತ್ಯಂತ ಕ್ರೂರಿ ಪ್ರಾಣಿ.ಇದು ಸದಾ ಬೇಟೆಯಾಡಲು ಹೊಂಚು ಹಾಕಿ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಬೇಟೆಯಾಡುವುದರಲ್ಲಿ ನಿಸ್ಸೀಮ.
ಅಂತಹ ಭಯಾನಕ ಪ್ರಾಣಿ ಮುಂದೆಯೇ ಆಟವಾಡಿದರೆ ಏನಾಗಬಹುದು ನೀವೊಮ್ಮೆ ಯೋಚಿಸಿ ನೋಡಿ. ಕಲ್ಪನೆಯಲ್ಲೂ ಭಯ ಹುಟ್ಟಿಸುವ ಘಟನೆಯೊಂದು ಇಲ್ಲಿ ನಡೆದಿದೆ.
ಬೋನಿನೊಳಗಿದ್ದ ಸಿಂಹದ ಜತೆ ಚೆಲ್ಲಾಟವಾಡಲು ಹೋದ ವ್ಯಕ್ತಿ ಕೊನೆಗೆ ಆಗಿದ್ದೇನು ಗೊತ್ತಾ... ಈ ದೃಶ್ಯ ಎಂತಹವರಿಗೂ ಮೈ ನಡುಗಿಸುತ್ತೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಮೃಗಾಲಯಕ್ಕೆ ಬಂದ ಈ ವ್ಯಕ್ತಿ ಪ್ರಾಣಿಗಳನ್ನು ನೋಡಿ ಸುಮ್ಮನೆ ಹೋಗಿದ್ದರೆ ಇಂತಹ ದುರಂತವೇ ಆಗುತ್ತಿರಲಿಲ್ಲ. ಸಿಂಹದ ಬೋನಿನತ್ತ ಬಂದವನು ಬೋನಿನೊಳಗೆ ಕೈ ಹಾಕಿ ಹೊರ ತೆಗೆಯುತ್ತಲೇ ಇದ್ದ, ಇದನ್ನು ನೋಡಿದ ಸಿಂಹ ಎರಡು ಮೂರು ಬಾರಿ ಏನೂ ಮಾಡಿಲ್ಲ. ಆಮೇಲೆ ಆಗಿದ್ದೇ ಬೇರೆ.
ಅದೃಷ್ಟವಶಾತ್ ಬೋನಿನೊಳಗಿದ್ದರಿಂದ ಈ ವ್ಯಕ್ತಿ ಬದುಕುಳಿದಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರುವು ದೂರದ ದಕ್ಷಿಣ ಆಫ್ರಿಕಾದ ಮೃಗಾಲಯದಲ್ಲಿ. ಇವನ ಆಟಕ್ಕೆ ಕೋಪಗೊಂಡ ಸಿಂಹ ಮತ್ತೊಂದು ಬಾರಿ ಕೈ ಹಾಕಲಿ ಎಂದೇ ಕಾಯುತ್ತಿತ್ತು. ಈತನೂ ಬೋನಿನೊಳಗೆ ಬೆರಳು ಹಾಕುವುದಕ್ಕೂ ಅದು ಅದೇ ಸಮಯಕ್ಕೆ ಅವನ ಬೆರಳನ್ನು ಕಚ್ಚಿ ಹಿಡಿಯಿತು. ಈಗ ಈತನ ನರಳಾಟ ಶುರುವಾಗಿತ್ತು. ಎಷ್ಟೇ ಕಷ್ಟ ಪಟ್ಟರೂ ಬಿಡದ ಸಿಂಹ ಇವನ ಬೆರಳನ್ನೇ ತಿಂದುಬಿಟ್ಟಿದೆ. (ಏಜೆನ್ಸೀಸ್)