ಸೌಹಾರ್ದದಿಂದ ಗಣೇಶ ಚತುರ್ಥಿ ಆಚರಿಸಲಿ

13Katakol1
Published on

ಕಟಕೋಳ: ಶಾಂತಿ-&ಸೌಹಾರ್ದದಿಂದ ಎಲ್ಲರೂ ಗಣೇಶ ಚತುರ್ಥಿ ಮತ್ತು ಈದ್​ ಮಿಲಾದ್​ ಹಬ್ಬ ಆಚರಿಸಬೇಕೆಂದು ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ಕರೆ ನೀಡಿದರು. ಸ್ಥಳಿಯ ಪೊಲೀಸ್​ ಠಾಣೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಣೇಶ ಚತುರ್ಥಿ ಹಾಗೂ ಈದ್​ ಮಿಲಾದ್​ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶ ಮಂಟಪ, ಮೂರ್ತಿ ಪ್ರತಿಷ್ಠಾಪಿಸಬೇಕು. ಮಂಟಪದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸಿದರೆ ಸೂಕ್ತ ಕ್ರಮ ಕೆಗೊಳ್ಳಲಾಗುವುದು. ಡಿಜೆ ಬಳಸುವಂತಿಲ್ಲ. ಸ್ವಯಂಸೇವಕರು 24 ಗಂಟೆಗಳ ಕಾಲ ಮಂಟಪದಲ್ಲಿ ಇರಬೇಕು. ಧ್ವನಿವರ್ಧಕ ಬೆಳಗ್ಗೆ 6ರಿಂದ ರಾತ್ರಿ 10 ರ ಗಂಟೆ ವರೆಗೆ ಮಾತ್ರ ಬಳಸಬೇಕು. ಧಾರ್ಮಿಕ ಭಾವನೆ ಕೆರಳಿಸುವ ಹಾಡು ಹಾಕಬಾರದು. ಪರಿಸರಸ್ನೇಹಿ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದರು. ಪಿಎಸ್​ಐ ಬಸವರಾಜ ಕೊಣ್ಣುರೆ ಮಾತನಾಡಿದರು. ಪಿಕೆಪಿಎಸ್​ ಅಧ್ಯ ಸಂಗಮೇಶ ಶೆಟ್ಟಿಸದಾವರ್ತಿ, ಬಾಳು ಹೊಸಮನಿ, ಮಹೇಶ ಕರ್ಕಿ, ವಿಶ್ವನಾಥ ಹಣಮರಟ್ಟಿ, ಗಂಗಾಧರ ಶಿಂದೋಗಿ, ಸೋಮನಗೌಡ ಮಲಗೌಡರ, ಮಲ್ಲನಗೌಡ ಸುರಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net