ಮತ್ತೆ ಬೆಂಗಳೂರು ಆಗಲಿದೆಯೇ ರಾಮನಗರ ಜಿಲ್ಲೆ? ಸುಳಿವು ನೀಡಿದ ಡಿಕೆಶಿ

unnamed
Published on

ರಾಮನಗರ: ಹಿಂದಿನಿಂದಲೂ ರಾಮನಗರ ಜಿಲ್ಲೆ  ವಿಭಜನೆಗೆ ತಮ್ಮ ಅಸಮಧಾನವನ್ನು ವ್ಯಕ್ತಪಡಿಸುತ್ತಲೇ ಬಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಈಗ ನಮ್ಮದು ಬೆಂಗಳೂರು ಜಿಲ್ಲೆ ಎಂದು ಹೇಳುವ ಮೂಲಕ ಹೊಸ ವಿವಾಧಕ್ಕೆ ನಾಂದಿ ಹಾಡಿದ್ದಾರೆ.

ಕನಕಪುರದ ಶಿವನಹಳ್ಳಿಯ ಶ್ರೀ ವಿರಭದ್ರಸ್ವಾಮಿ ದೇವಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನಕಪುರ ಜನತೆ ತಮ್ಮ ಜಮೀನನ್ನು ಮಾರಿಕೊಳ್ಳಬೇಡಿ, ನಿಮ್ಮ ಜಮೀನಿಗೆ 10 ಪಟ್ಟು ಬೆಲೆ ಬರುವಂತೆ ಮಾಡುವ ಶಕ್ತಿಯನ್ನು ದೇವರು ನೀಡಿದ್ದಾನೆ ಎಂದು ಹೇಳುತ್ತಾ... ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು  ಎಂದು ಪುನರುಚ್ಚರಿಸಿದ್ದಾರೆ . ಈ ಮೂಲಕ ರಾಮನಗರ ಜಿಲ್ಲೆಗೆ ಮರು ನಾಮಕರಣ ಯತ್ನಕ್ಕೆ ವೇದಿಕೆ ಮೂಲಕ ಚಾಲನೆ ನೀಡಿದ್ದಾರೆ.

ಡಿಕೆಶಿ ಏನಂದರು?: ನೀವು ರಾಮನಗರದವರು ಅಲ್ಲ, ಬೆಂಗಳೂರು ಜಿಲ್ಲೆಯವರು, ರಾಮನಗರ ಎಂದು ಹೇಳೀ ಮೂಲೆಗೆ ಸೇರಿಸಿಬೇಡಿ, ಕೆಲವರು ಹೆಸರಿಗೆ ಹೆಸರು ಮಾಡಿದ್ದಾರೆ. ಆದರೆ ನಾವೆಲ್ಲರೂ ಬೆಂಗಳೂರಿನವರು ಎಂದಿದ್ದಾರೆ.

ಇದೇ ವೇಳೆ ವೇದಿಕೆ ಮೇಲಿದ್ದವರ ಪ್ರಶ್ನೆಗೂ ಉತ್ತರಿಸಿದ ಅವರು, ನಾನೇನು ಸುಮ್ಮನೆ ಕುಳಿತಿಲ್ಲ...ಅದನ್ನು ಮಾಡುತ್ತೇನೆ... ವಿಜಯದಶಮಿಯಂದು ಹೇಳುತ್ತಿದ್ದೀನಿ, ದೇವರ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ ಎನ್ನುವ ಧೃಢ ಭರವಸೆಯನ್ನು ನೀಡುವ ಮೂಲಕ ರಾಮನಗರ ಜಿಲ್ಲೆ ಮರು ನಾಮಕರಣದ ಬಗ್ಗೆ ತಮ್ಮ ಅಚಲತೆಯನ್ನು ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ ರಾಜೀವ್​ ಗಾಂಧಿ ಆರೋಗ್ಯ ವಿವಿಯ ಮೆಡಿಕಲ್ ಕಾಲೇಜು ಸ್ಥಳಾಂತರ ವಿವಾಧದ ನಂತರ ಮತ್ತೊಮ್ಮೆ ಹೊಸ ವಿವಾಧವನ್ನು ಸೃಷ್ಠಿ ಮಾಡಿದಂಥೆ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net