ನೀರಾಗೆ ದೊರೆಯುವುದೇ ಆರ್ಥಿಕ ಬಲ !

11-10-rama-Neera (Sangraha chitra)
Published on

* ಬಜೆಟ್‌ನಲ್ಲಿ ಅನುಮತಿ, ಅನುದಾನ ಮೀಸಲಿಡುವ ನಿರೀಕ್ಷೆ

* ಜಿಲ್ಲೆಯಲ್ಲಿ ಕಾನೂನು ಮಾನ್ಯತೆ ಕೊಡಿಸಲು ಪ್ರಯತ್ನ

ಗಂಗಾಧರ್ ಬೈರಾಪಟ್ಟಣ ರಾಮನಗರ

ನೀರಾ ಹೋರಾಟದ ತವರು ರಾಮನಗರ ಜಿಲ್ಲೆ ಈ ಬಾರಿ ಬಜೆಟ್‌ನಲ್ಲಿ ನೀರಾ ಉದ್ಯಮಕ್ಕೆ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದೆ. ಕಳೆದ ಎರಡು ದಶಕದ ಹಿಂದೆ ಆರಂಭಗೊಂಡ ನೀರಾವರಿ ಚಳವಳಿಗೆ ಉಗ್ರ ರೂಪ ನೀಡಿ, ಇಬ್ಬರು ರೈತರು ಪ್ರಾಣಾರ್ಪಣೆ ಮಾಡಿದ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನೀರಾ ಇಳಿಸಲು ಅನುಮತಿ ನೀಡುವಂತೆ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ, ಇದಕ್ಕೆ ಸ್ಪಷ್ಟ ರೂಪ ನೀಡಲೇಬೇಕು ಎನ್ನುವ ಕಾರ್ಯ ಪ್ರಗತಿಯಲ್ಲಿದ್ದು, ಇದಕ್ಕೆ ಸರ್ಕಾರ ಅನುಮತಿ ಮತ್ತು ಇದಕ್ಕಾಗಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡುವ ಕೆಲಸವನ್ನು ಈ ಬಾರಿ ಸಿದ್ದರಾಮಯ್ಯ ಸರ್ಕಾರ ಮಾಡಬೇಕಿದೆ.

ಬೇಕಿದೆ ಅನುದಾನ?

ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ರೈತ ಉತ್ಪಾದಕ ಕಂಪನಿ(ಎ್ಪಿಒ) ಸ್ಥಾಪಿಸಲಾಗಿದೆ. ಸಾವಿರಕ್ಕೂ ಹೆಚ್ಚು ರೈತರು ಸದಸ್ಯರಾಗಿದ್ದಾರೆ. ಇದರಲ್ಲಿ ನೀರಾ ಇಳಿಸಲು ಆಸಕ್ತಿ ಇರುವ ರೈತರ ಗುಂಪುಗಳನ್ನು ಮಾಡಿ, ನೀರಾ ಇಳಿಸಿ ಮಾರಾಟ ಮಾಡಲು ನಿ‘ರ್ರಿಸಲಾಗಿದೆ. ಗುಂಪಿನ ಪ್ರತಿ ಸದಸ್ಯ ತನ್ನ ತೋಟದ ಉತ್ತಮ ಇಳುವರಿ ಇರುವ 10 ತೆಂಗಿನ ಮರಗಳಲ್ಲಿ ನೀರಾ ಇಳಿಸಿ, ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ, ಮಾರಾಟ ಮಾಡಬಹುದಾಗಿದೆ.

ನೀರಾ ಇಳಿಸಲು ಹೋರಾಟ ಆರಂ‘ಗೊಂಡ ದಿನದಿಂದಲೂ ಜಿಲ್ಲೆಯಲ್ಲಿ ಇದಕ್ಕೆ ಕಾನೂನಿನ ಮಾನ್ಯತೆ ಕೊಡಿಸಲು ಹಲವಾರು ಬಾರಿ ಪ್ರಯತ್ನಗಳು ನಡೆದಿವೆ. ಈಗ ಮುಂದುವರಿದ  ಭಾಗವಾಗಿ ಜಿಲ್ಲೆಯ ಎಪ್ ಪಿಓ ಜಿಲ್ಲಾಡಳಿತಕ್ಕೆ ನೀರಾ ಇಳಿಸಿ ಮಾರಾಟ ಮಾಡಲು ಅನುಮತಿ ನೀಡುವಂತೆ ಮನವಿ ಮಾಡಿದೆ.

ಆರಂಭವಾಗದ ಸಂಸ್ಕರಣ ಘಟಕ

ಎರಡು ದಶಕದ ಹಿಂದೆ ಹುಟ್ಟಿಕೊಂಡ ನೀರಾ ಹೋರಾಟ ನಿರಂತವಾಗಿ ನಡೆಯುತ್ತಲೇ ಬಂತು. ಇದರ ಪರಿಣಾಮ, ರಾಜ್ಯ ಸರ್ಕಾರ 2017-18ನೇ ಸಾಲಿನಲ್ಲಿ ನೀರಾವನ್ನು ಒಂದು ಪುಷ್ಟಿದಾಯಕ ಪೇಯವಾಗಿ ಬಳಸಲು ಅನುಮತಿ ನೀಡಿತು. ಜತೆಗೆ ಸುಮಾರು 3 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿತ್ತು. ರಾಜ್ಯದಲ್ಲಿ ನೀರಾ ಇಳಿಸಲು ಅನುಕೂಲವಾಗುವಂತೆ ನೀರಾ ನೀತಿಯನ್ನು ಜಾರಿಗೆ ತರುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿ, ಅಬಕಾರಿ ನಿಯಮಗಳಲ್ಲಿ ಕೆಲವು ಮಾರ್ಪಾಡು ಮಾಡುವುದಾಗಿಯೂ ಹೇಳಿತ್ತು. ಜತೆಗೆ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ನೀರಾ ಸಂಸ್ಕರಣ ಘಟಕಗಳ ಸ್ಥಾಪನೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದರೆ, ಈ ಮಾರ್ಗ ಸೂಚಿ ಜಿಲ್ಲಾ ತೋಟಗಾರಿಕೆ ಇಲಾಖೆಗೆ ಬಂದಿದೆಯಾದರೂ, ನೀರಾ ಘಟಕಗಳ ಸ್ಥಾಪನೆಗೆ ಬೇಕಾದ ಅನುದಾನ ಬಂದಿಲ್ಲ.

ಜಾರಿಗೆ ಬರದ ಆದೇಶ

2017ರ ಡಿಸೆಂಬರ್‌ನಲ್ಲಿ ರಾಜ್ಯ ತೋಟಗಾರಿಕೆ ಆಯುಕ್ತರು ರಾಜ್ಯ ವಲಯದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಘಟಕ ಸ್ಥಾಪನೆಗೆ ಮಾರ್ಗಸೂಚಿ ಹೊರಡಿಸಿದ್ದರು. ಅದರಂತೆ ತೆಂಗು ಅಭಿವೃದ್ಧಿ ಮಂಡಳಿಯಿಂದ ರಚನೆಯಾದ ನೋಂದಾಯಿತ ಬೆಳಗಾರರ ಕಂಪನಿಗಳು ಮತ್ತು ತೋಟಗಾರಿಕೆ ಇಲಾಖೆಯಿಂದ ರಚಿಸುವ ರೈತ ಉತ್ಪಾದಕ ಸಂಸ್ಥೆಗಳಿಗೆ ಮಾತ್ರ ನೀರಾ ಇಳಿಸಲು ಮತ್ತು ಉಪ ಉತ್ಪನ್ನಗಳ ತಯಾರಿಕೆಗೆ ಅನುಮತಿ ನೀಡಬೇಕು. ಇದಕ್ಕಾಗಿ ಅಬಕಾರಿ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದು ಸೇರಿ ಹಲವು ನಿಬಂ‘ನೆ ವಿಧಿಸಿದೆ. ವಿವಿ‘ ಹಂತದಲ್ಲಿ ಗರಿಷ್ಠ 25ರಿಂದ 50 ಲಕ್ಷ ರೂ.ವರೆಗೂ ಸಹಾಯ‘ನ ಮತ್ತು ಉತ್ಪನ್ನಗಳ ಮಾರುಕಟ್ಟೆ ಸೌಲ‘್ಯ ಕಲ್ಪಿಸಲು 10 ಲಕ್ಷ ರೂವರೆಗೂ ಸಹಾಯ‘ನವನ್ನು ಸರ್ಕಾರ ನೀಡುತ್ತದೆ. ಹೀಗೆ ಹಲವು ಮಾರ್ಗಸೂಚಿಗಳುಳ್ಳ ಆದೇಶ ಪ್ರತಿ ಬಂದು ಹಲವು ವರ್ಷಗಳು ಕಳೆದರೂ ನೀರಾ ಘಟಕ ಆರಂ‘ ಆಗಲೇ ಇಲ್ಲ.

ಬೇಕಿದೆ ಸರ್ಕಾರದ ನೆರವು?

ನೀರಾ ಇಳಿಸುವ ವಿಚಾರದಲ್ಲಿ ಹೋರಾಟ ಆರಂಭಿಸಿದ ನೆಲದಲ್ಲಿ ಈಗಲೂ ನೀರಾ ಇಳಿಸುವ ನಿಟ್ಟಿನಲ್ಲಿ ಸ್ಪಷ್ಟತೆ ಇಲ್ಲ. ಇದಕ್ಕೆ ಕಾರಣ ನೀರಾ ಇಳಿಸುವ ನಿಟ್ಟಿನಲ್ಲಿ ಬೇಕಾದ ನೆರವನ್ನು ಸರ್ಕಾರ ನೀಡದೇ ಇರುವುದು. ಈ ಹಿನ್ನೆಲೆಯಲ್ಲಿ ಈ ಬಾರಿ ಸರ್ಕಾರ ನೀರಾ ಇಳಿಸಿ ಮಾರಾಟ ಮಾಡುವ ಜಾಲವನ್ನು ಉದ್ಯಮ ಎಂದು ಪರಿಗಣಿಸಿ ಇದಕ್ಕೆ ಬೇಕಾದ ಆರ್ಥಿಕ ನೆರವು ನೀಡುವ ಜತೆಗೆ, ಮಾರುಕಟ್ಟೆ ಜಾಲ ವಿಸ್ತಾರ ಮಾಡಲು ನೆರವು ನೀಡಬೇಕಿದೆ.

ಈಗ ಪ್ರಯತ್ನ

ಚನ್ನಪಟ್ಟಣದಲ್ಲಿ ನೀರಾ ಇಳಿಸುವ ಸಂಬಂ‘ ಪ್ರಯತ್ನಗಳು ಆರಂ‘ಗೊಂಡಿವೆ. ಇದರ ಭಾಗವಾಗಿ ಕೇರಳ, ಕಾಸರಗೋಡಿಗೆ ಭೇಟಿ ನೀಡಿ ರೈತರ ತಂಡ ಪರಿಶೀಲನೆಯನ್ನು ಮಾಡಿದೆ. ಅಲ್ಲದೆ, ಚನ್ನಪಟ್ಟಣದ ಶಾಸಕ ಸಿ.ಪಿ. ಯೋಗೇಶ್ವರ್ ನೇತೃತ್ವದಲ್ಲಿ ಸಭೆಗಳು ನಡೆದು, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿವಾನ ಗ್ರಾಮದಲ್ಲಿ ಇರುವ ಗುರುಶ್ರೀ ಎಫ್ ಪಿಒ ಗೆ ರೈತರನ್ನು ಕರೆದುಕೊಂಡು ಹೋಗಿ ಪ್ರಾತ್ಯಕ್ಷಿಕೆಯನ್ನೂ ಕೊಡಿಸಲಾಗಿದೆ.

ನೀರಾ ನೈಸರ್ಗಿಕವಾಗಿ ದೊರೆಯುವ ಒಂದು ಉತ್ಕೃಷ್ಟ ಪಾನೀಯವಾಗಿದೆ. ಇದನ್ನು ರಾಷ್ಟ್ರೀಯ ಪಾನೀಯ ಎಂದು ಘೋಷಣೆ ಮಾಡಿದರೂ ತಪ್ಪಿಲ್ಲ. ನೀರಾ ಇಳಿಸಿ ಮಾರಾಟ ಮಾಡುವ ನಿಟ್ಟಿನಲ್ಲಿ ಸರ್ಕಾರ ಸಂಪೂರ್ಣ ನೆರವು ನೀಡಬೇಕು. ಇದಕ್ಕೆ ಬೇಕಾದ ಅನುದಾನವನ್ನು ಈ ಬಾರಿ ಬಜೆಟ್‌ನಲ್ಲಿ ಷೋಷಣೆ ಮಾಡಬೇಕು. ಸಿ.ಪುಟ್ಟಸ್ವಾಮಿ, ರೈತ ಮುಖಂಡರು. ಚನ್ನಪಟ್ಟಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net