ಕಾಡು ಹಂದಿ ದಾಳಿಗೆ ರೈತ ಗಾಯ

Published on

ಎಚ್.ಡಿ.ಕೋಟೆ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡು ಹಂದಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ.


ತಾಲೂಕಿನ ಹೆಬ್ಬಳ್ಳ (ಶಾಂತಿಪುರ) ಗ್ರಾಮದ ದುಂಡಯ್ಯ ಅವರ ಮಗ ಮಹಾದೇವನಾಯಕ ಗಾಯಗೊಂಡಿದ್ದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಂಗಳವಾರ ಜಮೀನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪೊದೆಯ ಒಳಗಿನಿಂದ ಬಂದ ಕಾಡು ಹಂದಿ ರೈತನ ಎಡಭಾಗದ ತೊಡೆಗೆ ತಿವಿದು ಗಾಯಗೊಳಿಸಿದೆ. ಇದರಿಂದ ವಿಚಲಿತನಾದ ರೈತ ಸಹಾಯಕ್ಕಾಗಿ ಕೂಗಾಟ ನಡೆಸಿದ್ದಾನೆ. ಅಷ್ಟರಲ್ಲಿ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಈತನ ಸಹಾಯಕ್ಕೆ ಬಂದಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಆತನನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಯಿತು.
ವಿಚಾರ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ರೈತನಿಂದ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net