ಭತ್ತದ ದಾಸ್ತಾನು ತಿಂದು ಹೋದ ಕಾಡಾನೆಗಳು

Published on

ಕನಕಪುರ: ತಾಲೂಕಿನ ಕಸಬಾ ಹೋಬಳಿ ನಾರಾಯಣಪುರ ಸಮೀಪದ ಗೊಲ್ಲಹಳ್ಳಿಯ ರೈತರೊಬ್ಬರು ಮನೆಯ ಹಿಂಭಾಗದಲ್ಲಿ ದಾಸ್ತಾನು ಮಾಡಿದ್ದ ಭತ್ತವನ್ನು ಶುಕ್ರುವಾರ ರಾತ್ರಿ ಕಾಡಾನೆಗಳು ತಿಂದು ಹೋಗಿವೆ.

ಗ್ರಾಮದ ಹೊಂಬಾಳೆಗೌಡ ಅವರು ತೋಟದ ಮನೆಯಲ್ಲಿ ಭತ್ತವನ್ನು ಶೇಖರಿಸಿಟ್ಟಿದ್ದರು. ಆದರೆ ಶುಕ್ರವಾರ ಎರಡು ಕಾಡಾನೆಗಳು ದಾಸ್ತಾನು ತಿಂದಿವೆ. ರೈತರ ದೂರಿನ ಮೇರೆಗೆ ಪ್ರಭಾರ ವಲಯ ಅರಣ್ಯಾಧಿಕಾರಿ ನಾಗರಾಜು, ವನಪಾಲಕ ಜಗದೀಶ್​ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರ್​ಎಫ್​ಒ ನಾಗರಾಜು ಪರಿಹಾರದ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net