ನೆಲಜಿ ಗ್ರಾಮದಲ್ಲಿ ಕಾಡಾನೆಗಳ ದಾಳಿ, ಪೈರು ನಾಶ

16.NPK .2
Published on

ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ನೆಲಜಿ ಗ್ರಾಮದ ಅಪ್ಪುಮಣಿಯಂಡ ರಘು ಸುಬ್ಬಯ್ಯ ಅವರ ಭತ್ತದ ಗದ್ದೆಗಳಿಗೆ ಬುಧವಾರ ಕಾಡಾನೆಗಳು ದಾಳಿ ಮಾಡಿ ಪೈರು ನಾಶ ಮಾಡಿವೆ.

ಇದೀಗ ಗದ್ದೆಗಳಲ್ಲಿ ಪೈರು ತೆನೆ ಬಿಡುವ ಹಂತದಲ್ಲಿದ್ದು ಕಾಡಾನೆಗಳ ದಾಂಧಲೆಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾಡಾನೆಗಳು ತೋಟಗಳಲ್ಲೂ ಅಡ್ಡಾಡಿದ್ದು ಕೃಷಿ ಫಸಲು ಹಾನಿಗೊಳಗಾಗಿದೆ. ನೆಲಜಿ, ಬಲ್ಲಮಾವಟಿ, ಪೇರೂರು ಗ್ರಾಮ ವ್ಯಾಪ್ತಿಗಳಲ್ಲಿ ಕಾಡಾನೆಗಳು ನಿರಂತರ ದಾಳಿ ಮಾಡುತ್ತಿದ್ದು, ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ರೈತ ರಘು ಸುಬ್ಬಯ್ಯ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net