

ನಾಪೋಕ್ಲು: ಸಮೀಪದ ಕಿರುಂದಾಡು ಗ್ರಾಮದ ತೋಟಗಳಲ್ಲಿ ಶನಿವಾರ ಕಾಡಾನೆಗಳು ದಾಂಧಲೆ ಮಾಡಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿವೆ.
ತೆಂಗು, ಅಡಕೆ, ಕಾಫಿ, ಬಾಳೆ ಗಿಡಗಳನ್ನು ನಾಶಪಡಿಸಿವೆ. ಪಾರಾಣೆ ಗ್ರಾಮ ಪಂಚಾಯಿತಿಯ ಕಿರುಂದಾಡು ಗ್ರಾಮದ ಕಲಿಯಂಡ ಪೂವಣ್ಣ ಅವರ ತೋಟಗಳಲ್ಲಿ ದಾಳಿ ನಡೆಸಿರುವ ಕಾಡಾನೆಗಳ ಹಿಂಡು 3 ತೆಂಗು, ಸುಮಾರು 60 ಅಡಿಕೆ ಗಿಡ, ಕಾಫಿ, ಬಾಳೆ ಸೇರಿದಂತೆ ಇನ್ನಿತರೆ ಗಿಡಗಳನ್ನು ನಾಶಪಡಿಸಿವೆ.
ಕೈಕಾಡು ಗ್ರಾಮದ ಕೆ.ಡಿ.ಮೋಹನ್, ಹಂಸ, ಅಬ್ದುಲ್ಲಾ ಸೇರಿದಂತೆ ಇನ್ನಿತರೆ ತೋಟಗಳನ್ನು ಹಾನಿಮಾಡಿವೆ.