ಕಾಡಾನೆಗಳ ದಾಳಿಗೆ ಚನ್ನಪಟ್ಟಣದಲ್ಲಿ ರಾಗಿ ಹೊಲ ನಾಶ

59ecb09b-7be9-498f-98ad-66fb686ea7e7.jpg
Published on


ಚನ್ನಪಟ್ಟಣ: ತಾಲೂಕಿನ ಹೊಟ್ಟಿಗನ ಹೊಸಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಆನೆಗಳು ದಾಳಿ ಮಾಡಿದು ಎರಡು ಎಕರೆಗೂ ಮಿಗಿಲಾದ ರಾಗಿ ಬೆಳೆಯನ್ನು ನಾಶ ಮಾಡಿರುವ ಘಟನೆ ನಡೆದಿದೆ.

ಗ್ರಾಮದ ರೈತ ರಾಮಚಂದ್ರರವರು ಬೆಳಗಿನ ಜಾವ ಎಂದಿನಂತೆ ಜಮೀನಿಗೆ ಹೋದಾಗ ಆನೆ ದಾಳಿ ನಡೆಸಿ ಬೆಳೆ ನಾಶಮಾಡಿರುವುದು ಬೆಳಕಿಗೆ ಬಂದಿದೆ.

ಇದರಿಂದ ರೈತರದ ರಾಮಚಂದ್ರ ರವರಿಗೆ ಸಾವಿರಾರೂಪಾಯಿ ನಷ್ಟವಾಗಿದ್ದು ಕೂಡಲೇ ಅರಣ್ಯ ಇಲಾಖೆ ಇವರ ನೋವಿಗೆ ಸ್ಪಂದಿಸಬೇಕು ಎಂದು ಗ್ರಾಮಸ್ತರು ಮನವಿ ಮಾಡಿದ್ದಾರೆ.

ಸಾಮಾನ್ಯವಾಗಿ ಕಣ್ವ ಹೊಳೆಗೆ ಜಲ ಕ್ರೀಡೆಗೆ ಆಗಮಿಸಿ ಈ ಭಾಗದ ಜನರಲ್ಲಿ ಆನೆಗಳ ಆತಂಕ ಮೂಡಿಸಿದ್ದವು.ಆದರೆ ಜಮೀನಿಗೆ ರಾತ್ರೋರಾತ್ರಿ ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತಿರುವುದು ಸ್ಥಳೀಯರ ಆತಂಕ ಹೆಚ್ಚುವಂತೆ ಮಾಡಿದೆ. ಮತ್ತೆ ದಾಳಿಯಾಗದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಲ್ಲಿದ ಅಕ್ಕ ಪಕ್ಕದ ರೈತರು ಆಗ್ರಹಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net