

ಪುತ್ತೂರು ಗ್ರಾಮಾಂತರ: ಅರಿಯಡ್ಕ ಗ್ರಾಪಂ ವ್ಯಾಪ್ತಿಯ ಮಾಡ್ನೂರು ಗ್ರಾಮದ ಪೂವಂದೂರು ವ್ಯಾಪ್ತಿಗೆ ಮತ್ತೆರಡು ಕಾಡಾನೆಗಳು ಬಂದು ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿದೆ.
ಪೂವಂದೂರು ಪರಿಸರಕ್ಕೆ ನಾಲ್ಕನೇ ಬಾರಿಗೆ ಕಾಡಾನೆಗಳು ಲಗ್ಗೆಯಿಟ್ಟು ಕೃಷಿ ಹಾನಿ ಹಾವಳಿ ಮುಂದುವರಿಸಿರುವುದರಿಂದ ಈ ಭಾಗದ ಕೃಷಿಕರು ಕಂಗಾಲಾಗಿದ್ದಾರೆ. ಕಾಡಾನೆಗಳೆರಡು ವಿದ್ಯಾ ಪೂವಂದೂರು, ಸ್ವಾತಿ ಭಟ್ ಹಾಗೂ ಮಹೇಶ್ ಪೂವಂದೂರು ಸೇರಿದಂತೆ ನಾಲ್ವರು ಕೃಷಿಕರ ತೋಟಗಳಿಗೆ ನುಗ್ಗಿ ತೆಂಗು, ಅಡಕೆ, ಬಾಳೆಕೃಷಿಗಳನ್ನು ನಾಶ ಮಾಡಿವೆ. ಈ ಕೃಷಿಕರ ತೋಟಗಳಿಗೆ ಕೆಲ ದಿನಗಳ ಹಿಂದೆಯೂ ಕಾಡಾನೆಗಳು ನುಗ್ಗಿ ಅಪಾರ ಪ್ರಮಾಣದ ಕೃಷಿ ನಾಶ ಮಾಡಿದ್ದವು. ಪೂವಂದೂರಿನ ನಿರ್ಮಲಾ ರಾವ್, ನಾರಾಯಣ ರಾವ್ ಅವರ ತೋಟಗಳಿಗೆ ನುಗ್ಗಿ ತೆಂಗು, ಅಡಕೆ, ಬಾಳೆ ನಾಶ ಮಾಡಿದ್ದವು.