ಆದ್ಯಪಾಡಿ ಕ್ಷೇತ್ರ ಪ್ರಸಾದ ಉಬ್ಬಸಕ್ಕೆ ಔಷಧ - ಪ್ರಧಾನ ಅರ್ಚಕ ಸದಾಶಿವ ಭಟ್ ವಿವರಣೆ -- ವೆಬ್‌ಸೈಟ್ ಲೋಕಾರ್ಪಣೆ

mng-dec26-adhyapady
Published on

ಗುರುಪುರ: ಪ್ರಚಾರ ವಾಧ್ಯಮದಿಂದ ಶ್ರೀ ಕ್ಷೇತ್ರದ ಕಾರ್ಣಿಕ ಎಲ್ಲೆಡೆ ಬೆಳಕಿಗೆ ಬಂದಿದೆ. ಇಲ್ಲಿನ ಪ್ರಸಾದವು ಉಬ್ಬಸ ಸಹಿತ ಇತರ ರೋಗಗಳಿಗೆ ರಾಮಬಾಣ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸದಾಶಿವ ಭಟ್ ಹೇಳಿದರು.

ದೇವಳ ಜೀರ್ಣೋದ್ಧಾರ ಹಂತದಲ್ಲಿದ್ದು, 2025ರ ವಾರ್ಚ್ 16ರಂದು ಬ್ರಹ್ಮಕಲಶೋತ್ಸವ ನಡೆಯಲಿರುವ ಆದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಸಂಪೂರ್ಣ ಮಾಹಿತಿಯುಳ್ಳ ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗುರುವಾರ ಮಾಹಿತಿ ನೀಡಿದರು.

ಖಾಸಗಿ ಚಾನೆಲ್ ವಾಲೀಕ ಲೀಲಾಕ್ಷ ಬಿ.ಕರ್ಕೇರ ಲೋಕಾರ್ಪಣೆಗೈದು ಮಾತನಾಡಿ, ಹಿಂದೆ ಕಡಿಮೆ ಜಾಗದಲ್ಲಿದ್ದ ದೇವಸ್ಥಾನವು ಜೀರ್ಣೋದ್ಧಾರದೊಂದಿಗೆ ವಿಸ್ತಾರಗೊಳ್ಳುತ್ತಿದೆ. ಪ್ರಸಕ್ತ ಎಲ್ಲ ದೈವ, ದೇವರ ಕ್ಷೇತ್ರಗಳು ಜೀರ್ಣೋದ್ಧಾರಗೊಳ್ಳುತ್ತಿವೆ. ಮುಂದಿನ ಪೀಳಿಗೆಗೆ ಧಾರ್ಮಿಕ ಕ್ಷೇತ್ರಗಳ ಮಹತ್ವ ತಿಳಿಯುವಂತಾಗಬೇಕು ಎಂದರು.

ದೇವಸ್ಥಾನದ ಸಮಗ್ರ ವಾಹಿತಿ ಒಳಗೊಂಡಿರುವ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ಅಪ್ಲಿಕೇಶನ್‌ನ್ನು ಕ್ರಮವಾಗಿ ಖಾಸಗಿ ಟಿ.ವಿ. ನಿರೂಪಕ ನವೀನ್ ಶೆಟ್ಟಿ ಎಡ್ಮೆವಾರ್ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ ಅನಾವರಣಗೊಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ, ಶಾಸಕ ಡಾ.ಭರತ್ ಶೆಟ್ಟಿ ವಾತನಾಡಿ, ಸುವಾರು 900 ವರ್ಷಗಳ ಇತಿಹಾಸವುಳ್ಳ ದೇವಸ್ಥಾನದ ಕಾರ್ಣಿಕದ ಬಗ್ಗೆ ಭಕ್ತರಿಗೆ ತಿಳಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳು ಪ್ರಯೋಜನಕಾರಿ ಎಂದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸುಜಿತ್ ಆಳ್ವ ಏತಮೊಗರುಗುತ್ತು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಅಶ್ವಿನ್ ಬಲ್ಲಾಲ್ ಬೈಲುಬೀಡು ಮತ್ತು ಶ್ರೀಧರ ಆಳ್ವ ಕಂದಾವರ ಬಾಳಿಕೆ, ರಮೇಶ್ ಉಡುಪ ಆದ್ಯಪಾಡಿ, ರವಾನಾಥ ಅತ್ತಾರ್(ಚಿತ್ತಣ್ಣ), ರಾಜೀವ ಆಳ್ವ ಆದ್ಯಪಾಡಿಗುತ್ತು ಉಪಸ್ಥಿತರಿದ್ದರು.

ಸತೀಶ್ ಶೆಟ್ಟಿ ಕಂದಾವರ ಸ್ವಾಗತಿಸಿದರು. ಅಶ್ವಿನ್ ಶೆಟ್ಟಿ ಬೊಂಡಂತಿಲ ನಿರೂಪಿಸಿದರು. ಸುಕೇಶ್ ವಾಣೈ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net