ಪೂವಂದೂರಿನಲ್ಲಿ ಕಾಡಾನೆ ಉಪಟಳ

New Project (29)
Published on

ಪುತ್ತೂರು ಗ್ರಾವಾಂತರ: ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಡ್ನೂರು ಗ್ರಾಮದಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು, ಕಳೆದ ವಾರ ನಿರಂತರವಾಗಿ ಪೂವಂದೂರು ಪರಿಸರಕ್ಕೆ ಲಗ್ಗೆಯಿಟ್ಟು ಅಪಾರ ಪ್ರವಾಣದ ಕೃಷಿ ಹಾನಿ ವಾಡಿದ್ದ ಕಾಡಾನೆಗಳು ಮಂಗಳವಾರ ರಾತ್ರಿ ಪೂವಂದೂರು ಪ್ರದೇಶಕ್ಕೆ ಬಂದು ಉಪಟಳ ಮುಂದುವರಿಸಿವೆ. ಇದರಿಂದಾಗಿ ಈ ಭಾಗದ ಕೃಷಿಕರು ಆತಂಕಿತರಾಗಿದ್ದಾರೆ. ವಾತ್ರವಲ್ಲದೆ ಜೀವ ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ವಾಣವಾಗಿದೆ.

ಕಳೆದ ಏಳೆಂಟು ದಿನಗಳಿಂದ ಕಾಡಾನೆಗಳು ವಾಡನ್ನೂರು ಗ್ರಾಮದ ಅಮ್ಚಿನಡ್ಕ, ಅಂಕೋತಿವಾರು, ಮುಖಾರಿಮೂಲೆ, ಚಾಕೋಟೆ, ಕೊಚ್ಚಿ ಹಾಗೂ ಪೂವಂದೂರು ವ್ಯಾಪ್ತಿಯಲ್ಲಿ ರಾತ್ರಿ ವೇಳೆ ದಿನಕ್ಕೊಂದು ದಿನ ಪ್ರದೇಶ ಬದಲಾಯಿಸಿ ತಿರುಗಾಡುತ್ತಾ ಕೃಷಿ ಹಾನಿ ವಾಡುತ್ತಿದ್ದು, ಪೂವಂದೂರು ವ್ಯಾಪ್ತಿಗೆ ಪದೇಪದೆ ಬರುತ್ತಿರುವುದರಿಂದ ಈ ವ್ಯಾಪ್ತಿಯ ಜನತೆ ಭಯಭೀತರಾಗಿದ್ದಾರೆ. ಹಗಲು ವೇಳೆ ಕಣಿಯಾರು - ಕೊಳ್ತಿಗೆ ರಕ್ಷಿತಾರಣ್ಯ ಪ್ರದೇಶ ಸೇರಿಕೊಳ್ಳುತ್ತಿರುವ ಕಾಡಾನೆಗಳು ರಾತ್ರಿ ವೇಳೆ ಕೃಷಿ ಪ್ರದೇಶಗಳಿಗೆ ಲಗ್ಗೆಯಿಟ್ಟು ಹಾನಿ ವಾಡುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net