ಪತ್ನಿ ಕೊಂದು ಶವದ ಜತೆ ಕುಳಿತಿದ್ದ ಪತಿ! ಭೀಕರ ದೃಶ್ಯ ಕಂಡು ಬೆಚ್ಚಿಬಿದ್ದ ಮಗ

murder 1
Published on

ಮಹದೇಶ್ವರ ಬೆಟ್ಟ: ಪತ್ನಿಯನ್ನು ಕೊಂದು ಮನೆ ಬಾಗಿಲು ಮುಚ್ಚಿ‌ ಶವದ ಜೊತೆ ಕುಳಿತಿದ್ದ ಪತಿರಾಯ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಮಹದೇಶ್ವರ ಬೆಟ್ಟದ ಆಣೆಹೊಲ ಗ್ರಾಮದ ಸಿದ್ದಮ್ಮ(28) ಮೃತ ದುರ್ಧೈವಿ. ಸೋಲಿಗರ ಮಹದೇವ(36) ಕೊಲೆ ಆರೋಪಿ.

ದಂಪತಿ ನಡುವೆ ಪ್ರತಿದಿನ ಕೌಟುಂಬಿಕ ಕಲಹ ನಡೆಯುತ್ತಿತ್ತು. ಇವರಿಗೆ 15 ವರ್ಷದ ಮಗ ಇದ್ದಾನೆ. ಮದ್ಯ ವ್ಯಸನಿಯಾಗಿದ್ದ ಮಹದೇವ ಶುಕ್ರವಾರ ಸಂಜೆ ಕೂಲಿ ಕೆಲಸ ಮುಗಿಸಿ ಮನೆಗೆ ಬಂದು ಸಿದ್ದಮ್ಮ ಜೊತೆ ಜಗಳ ತೆಗೆದಿದ್ದ. ಇದನ್ನು ತಡೆದ ಮಗನಿಗೂ ಹೊಡೆದು ಮನೆಯಿಂದ ಹೊರಗಟ್ಟಿದ್ದ. ಬಳಿಕ ಪತ್ನಿಗೆ ಮಚ್ಚಿನಿಂದ ತಲೆಗೆ ಹೊಡೆದು ಕೊಲೆಗೈದಿದ್ದಾನೆ.

ಈ ವಿಷಯ ಯಾರಿಗೂ ತಿಳಿಯದಿರಲಿ ಎಂದು ಮನೆ ಬಾಗಿಲು ಮುಚ್ಚಿ ಪತ್ನಿ ಶವದ ಜೊತೆಗೆ ಮಹದೇವ ಕುಳಿತಿದ್ದ. ಮಗ ಮನೆಗೆ ಮರಳಿದಾಗ ತಾಯಿ ಶವ ಕಂಡು ಚೀರಾಡುತ್ತಿದ್ದಂತೆ ನೆರೆ ಮನೆಯವರು ಕೂಡಲೇ ಪಾಲಾರ್ ಪೋಡಿನಲ್ಲಿದ್ದ ಸಿದ್ದಮ್ಮ ಸಂಬಂಧಿಕರಿಗೆ ಕರೆ ಮಾಡಿ ಪೊಲೀಸರಿಗೆ ದೂರು ದಾಖಲಿಸಲು ನೆರವಾಗಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ‌ ಪೊಲೀಸರು ಮಹದೇವನನ್ನು ಬಂಧಿಸಿ, ಸಿದ್ದಮ್ಮಳ ಮೃತದೇಹವನ್ನು ಶವ ಪರೀಕ್ಷೆಗೆ ರವಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net