ಭಾರಿ ಬಾಜಿಯಲ್ಲಿ ಲಕ್​ ಯಾರಿಗೆ?

BJP JDS Congress
Published on

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ತೀವ್ರ ಜಿದ್ದಾಜಿದ್ದಿನ ಚನ್ನಪಟ್ಟಣ ಉಪಕದನದ ಫಲಿತಾಂಶಕ್ಕೆ ಣಗಣನೆ ಆರಂಭವಾಗಿದ್ದು, ಫಲಿತಾಂಶದ ಬಗೆಗಿನ ಕೌತುಕ ಹೆಚ್ಚಾಗಿದೆ. ಕ್ಷೇತ್ರದ ಚುನಾವಣಾ ಫಲಿತಾಂಶದ ಮೇಲೆ ಕೇವಲ ತಾಲೂಕಷ್ಟೇ ಅಲ್ಲದೆ, ಇಡೀ ರಾಜ್ಯ ದೃಷ್ಟಿ ನೆಟ್ಟಿದೆ.

ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದಾಗಿ ತೆರವಾದ ಸ್ಥಾನಕ್ಕೆ ನಡೆದ ಈ ಉಪಚುನಾವಣೆ ಚನ್ನಪಟ್ಟಣ ರಾಜಕೀಯ ಇತಿಹಾಸಕ್ಕೆ ಹೊಸ ಭಾಷ್ಯ ಬರೆದಿದೆ. ಈಗ, ಈ ಕದನದ ವಿಜಯಮಾಲೆ ಯಾರ ಕೊರಳಿಗೆ ಎಂಬುದೇ ತೀವ್ರ ಕುತೂಹಲದ ಪ್ರಶ್ನೆಯಾಗಿದೆ. ತಾಲೂಕಿನ ಮೂಲೆಮೂಲೆಯಲ್ಲೂ ಸೋಲು&ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಗೆಲ್ಲೋರ್ಯಾರು...? ಸೋಲೋರ್ಯಾರು...? ಎಂಬ ಚರ್ಚೆಯ ಜತೆಗೆ ಬಾಜಿ ವ್ಯವಹಾರವೂ ಜೋರಾಗಿದೆ.

ಮೇಲ್ನೋಟಕ್ಕೆ ಇದು ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್​ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್​ ನಡುವೆ ನಡೆದ ಸೆಣೆಸಾಟ ಎನಿಸಿದರೂ, ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ ನಡುವೆ ರಾಜಕೀಯ ಪ್ರತಿಷ್ಠೆಗಾಗಿ ನಡೆದ ಹೋರಾಟ ಎಂದರೆ ತಪ್ಪಾಗಲಾರದು.

ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಈ ಇಬ್ಬರೂ ಟಾನುಟಿ ನಾಯಕರು ನಡೆಸಿದ ಹೋರಾಟಕ್ಕೆ ತಾಲೂಕು ಸಾಯಾಗಿದೆ. ಪ್ರಭಾವಿ ನಾಯಕರಾದ ಈ ಇಬ್ಬರಲ್ಲಿ  ಕ್ಷೇತ್ರದ ಜನ ಅಪ್ಪಿಕೊಂಡಿರುವುದು ಯಾರನ್ನು ಎಂಬುದೇ ಯಪ್ರಶ್ನೆಯಾಗಿದೆ. ಇದರೊಂದಿಗೆ, ನಿಖಿಲ್​ ಹಾಗೂ ಯೋಗೇಶ್ವರ್​ ನಡುವೆ ಅಖಾಡದಲ್ಲಿ ಸಮಬಲದ ಹೋರಾಟ ನಡೆದಿದ್ದು, ಫಲಿತಾಂಶದ ಲೆಕ್ಕಾಚಾರ ಊಹಿಸಲು ಕಷ್ಟ ಎಂಬ ಪರಿಸ್ಥಿತಿ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ.

ಕೋಟ್ಯಂತರ ರೂ.ಬೆಟ್ಟಿಂಗ್​!

ಈ ಉಪಚುನಾವಣೆ ಗೆಲ್ಲಲು ಎರಡು ಕಡೆಯಿಂದಲೂ ಕೋಟ್ಯಂತರ ರೂ.ಹಣವನ್ನು ನೀರಿನಂತೆ ಹರಿಸಲಾಗಿದೆ. ಇದೀಗ, ಫಲಿತಾಂಶದ ಮೇಲೂ ಕೋಟ್ಯಂತರ ರೂ.ಬಾಜಿ ವ್ಯವಹಾರ ಆರಂಭವಾಗಿದೆ. ಮೂಲಗಳ ಪ್ರಕಾರ ಅಂದಾಜು ನೂರು ಕೋಟಿಗಿಂತ ಅಧಿಕ ಬಾಜಿ ವಹಿವಾಟು ನಡೆದಿದೆ ಎನ್ನಲಾಗಿದೆ. ಬೂತ್​ನಿಂದ ಹಿಡಿದು ಲೀಡ್​ವರೆಗೂ ತರಹೇವಾರಿ ಬೆಟ್ಟಿಂಗ್​ ನಡೆಯುತ್ತಿದೆ. ಸೋಲು&ಗೆಲುವಿನ ಬಾಜಿಗೆ ಸಮಬಲದ ಬೆಟ್ಟಿಂಗ್​ ಕಟ್ಟುತ್ತಿದ್ದಾರೆ. ಕೇವಲ ತಾಲೂಕಷ್ಟೇ ಅಲ್ಲದೆ, ಹೊರ ಜಿಲ್ಲೆಗಳಿಂದಲೂ ಬೆಟ್ಟಿಂಗ್​ ಪ್ರಿಯರು ಆಗಮಿಸಿ, ಬಾಜಿ ವ್ಯವಹಾರ ರಂಗೇರಿಸುತ್ತಿದ್ದಾರೆ. ಒಟ್ಟಾರೆ, ಗೆಲ್ಲುವ ಕಡೆಯವರಿಗೆ ಜಯದ ಜತೆಗೆ ಹಣದ ಲಕ್​ ಸಿಗಲಿದೆ. ಸೋಲುವವರಿಗೆ ಸೋಲಿನ ಜತೆಗೆ ಜೇಬು ಕೂಡ ಖಾಲಿಯಾಗಲಿದೆ. ಲಾಭ ಯಾರಿಗೆ? ನಷ್ಟ ಯಾರಿಗೆ ಎಂಬುದಕ್ಕೆ ನಾಳೆ ಉತ್ತರ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net