

ಬೈಲಹೊಂಗಲ: ಶಿಣದ ಆರ್ಥಿಕ ಹೊರೆ ಕಡಿಮೆಗೊಳಿಸುವ ಜತೆಗೆ ಬಡ ಮಕ್ಕಳು ಉನ್ನತ ಅಧಿಕಾರಿಗಳಾಗಬೇಕೆಂಬ ಸದುದ್ದೇಶದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಪಟ್ಟಣದ ಚನ್ನಮ್ಮ ಸಮಾಧಿಯ ಗಣಾಚಾರಿ ಶಿಣ ಸಂಸ್ಥೆಯಲ್ಲಿ ಡಾ.ವಿ.ಐ.ಪಾಟೀಲ ೌಂಡೇಷನ್ ಹಾಗೂ ಧಾರವಾಡದ ಸಂಕಲ್ಪ ಅಕಾಡೆಮಿ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀೆಗಳ ಉಚಿತ ತರಬೇತಿ ಪ್ರವೇಶ ಪರೀೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ೇತ್ರದ 100 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್, ಪಿಎಸ್ಐ ಸೇರಿ ವಿವಿಧ ಸ್ಪರ್ಧಾತ್ಮಕ ಪರೀೆಗಳಿಗೆ ಉಚಿತ ತರಬೇತಿ ನಡೆಯಲಿದೆ. ಕಳೆದ ಹತ್ತು ವರ್ಷಗಳಿಂದ ಧಾರವಾಡ ಸಂಕಲ್ಪ ಅಕಾಡೆಮಿ ಆಶ್ರಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತ ಬಂದಿದ್ದು, ನೂರಾರು ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದು ತಿಳಿಸಿದರು.
ನುರಿತ ಶಿಕರಿಂದ ಬೋಧನೆ, ಸ್ಮಾರ್ಟ್ಕ್ಲಾಸ್ ಮಾದರಿ ಪರೀೆ, ಲೈಬ್ರರಿ, ಪ್ರತ್ಯೇಕ ಹಾಸ್ಟೆಲ್ ಸೇರಿ ಉಪಯುಕ್ತ ಅಧ್ಯಯನ ಸಾಮಗ್ರಿ ಹೊಂದಿದೆ. ಹೀಗಾಗಿ, ಪ್ರತಿಭಾವಂತರು ಸದುಪಯೋಗಪಡಿಸಿಕೊಳ್ಳಬೇಕು. ಜು.28ರಂದು ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದರು.
ಡಾ.ಸಿ.ಬಿ.ಗಣಾಚಾರಿ ಮಾತನಾಡಿ, ಡಾ.ವಿ.ಐ.ಪಾಟೀಲ ೌಂಡೇಷನ್ ಹಾಗೂ ಧಾರವಾಡದ ಸಂಕಲ್ಪ ಅಕಾಡೆಮಿ ಕಾರ್ಯ ಶ್ಲಾನೀಯ ಎಂದರು.
ಸಂಕಲ್ಪ ಅಕಾಡೆಮಿ ನಿರ್ದೇಶಕ ವಿಠ್ಠಲಗೌಡ ಪಾಟೀಲ ಮಾತನಾಡಿದರು. ತರಬೇತಿ ಪಡೆದು ಸರ್ಕಾರಿ ಕೆಲಸ ಪಡೆದವರನ್ನು ಸನ್ಮಾನಿಸಲಾಯಿತು.
ಮಹೇಶ ಹರಕುಣಿ, ವಿ.ಜಿ.ಪಾಟೀಲ, ಗಂಗಪ್ಪ ಗುಗ್ಗರಿ, ಜಗದೀಶ ಜಂಬಗಿ, ಬಿ.ಬಿ.ಸಂಗನಗೌಡರ, ಮಹಾಂತೇಶ ಗುಂಡ್ಲೂರ, ರಿತೇಶ್ ಪಾಟೀಲ, ರಾಜು ದಳವಾಯಿ, ಚಂದನ ಕೌಜಲಗಿ, ಬಾಳನಗೌಡ ಪಾಟೀಲ, ವಿಶಾಲ ಬೋಗೂರ, ಬಸವರಾಜ ನೇಸರಗಿ, ಶಿವಪ್ರಸಾದ ಪಾಟೀಲ, ಸಿದ್ಧಾರೂಢ ಹೊಂಡಪ್ಪನವರ ಇತರರಿದ್ದರು.