ಸರ್ಕಾರ ಸೌಲಭ್ಯ ಸದ್ಬಳಕೆಯಾಗಲಿ

DEC27-HRP-1
ಹರಪನಹಳ್ಳಿಯ ತಾ.ಪಂ ಸಾಮಾರ್ಥ್ಯಸೌಧದಲ್ಲಿ ಅಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಪುರಸಭೆ ಸದಸ್ಯರಾದ ಎಂವಿ.ಅಂಜಿನಪ್ಪ, ಲಾಟಿ ದಾದಪೀರ್, ಉದ್ದಾರ ಗಣೇಶ, ಶಾಸಕರ ರಾಜಕೀಯ ಕಾರ್ಯದರ್ಶಿ ಪ್ರದೀಪ್, ಯೋಜನಾಧಿಕಾರಿ ನವೀನ್, ತಾಪಂ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್ ಇದ್ದರು.
Published on

ಹರಪನಹಳ್ಳಿ: ವಿಕಲಚೇತನರು ಶಕ್ತಿ ಶಾಲಿಗಳು ಸಮಸ್ಯೆ ಯಾವುದೇ ಇರಲಿ ಎದೆಗುಂದದೆ ಮೆಟ್ಟಿ ನಿಲ್ಲುವ ಅದಮ್ಯ ಚೇತನರು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ತಾಪಂ ಸಾಮಾರ್ಥ್ಯ ಸೌಧದಲ್ಲಿ ತಾಲೂಕು ಆಡಳಿತ, ಪುರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ ಇಲಾಖೆ ಹಾಗೂ ವಿಕಲಚೇತನರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಅಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಮಂಗಳವಾರ ಮಾತನಾಡಿದರು.

ವಿಕಲಚೇತನರಿಗಾಗಿಯೇ ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಿ. ವಿಶೇಷ ಕಾಳಜಿಯಿಂದ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.

ವಿಕಲಚೇತನರ ಜಿಲ್ಲಾ ಕಲ್ಯಾಣಾಧಿಕಾರಿ ಕೃಷ್ಣ ಸಾ ಬಾಕಳೆ, ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ವಿಶೇಷ ಸಾಧಕರಿಗೆ ಗೌರವಿಸಲಾಯಿತು.

ಪುರಸಭೆ ಸದಸ್ಯರಾದ ಎಂವಿ.ಅಂಜಿನಪ್ಪ, ಲಾಟಿ ದಾದಪೀರ್, ಉದ್ದಾರ ಗಣೇಶ, ಶಾಸಕರ ರಾಜಕೀಯ ಕಾರ್ಯದರ್ಶಿ ಪ್ರದೀಪ್, ಯೋಜನಾಧಿಕಾರಿ ನವೀನ್, ತಾಪಂ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ವಿಕಲಚೇತನರ ನೋಡಲಾಧಿಕಾರಿ ರೇಣುಕಾ, ಎಂಆರ್‌ಡಬ್ಲ್ಯೂ ಆರ್.ಧನರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net