More

    ಅಂಗವಿಕಲರಿಗೆ ಬೇಕು ಕೌಶಲಕ್ಕೆ ತಕ್ಕ ಸೌಲಭ್ಯ

    ದಾವಣಗೆರೆ : ಅಂಗವಿಕಲರಿಗೆ ಕೇವಲ ತ್ರಿಚಕ್ರದ ಬೈಸಿಕಲ್, ಸ್ಕೂಟರ್ ನೀಡುವುದಷ್ಟೇ ಅಲ್ಲ, ಅವರ ಕೌಶಲಕ್ಕೆ ತಕ್ಕ ಸೌಲಭ್ಯ ಕಲ್ಪಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಸಲಹೆ ನೀಡಿದರು.
     ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಎನೇಬಲ್ ಇಂಡಿಯಾ, ಸ್ಫೂರ್ತಿ ಸಂಸ್ಥೆ, ಕರ್ನಾಟಕ ರಾಜ್ಯ ಆರ್.ಪಿ.ಡಿ, ಟಾಸ್ಕ್ ಫೋರ್ಸ್ ಸಹಯೋಗದಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ, ಅಂಗವಿಕಲರ ಹಕ್ಕುಗಳ ಕಾಯ್ದೆ 2016 ಮತ್ತು ಶೇ. 5 ಅನುದಾನ ಬಳಕೆ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.
     ಅವರಿಗೆ ಕಂಪ್ಯೂಟರ್, ಜೆರಾಕ್ಸೃ್ ಯಂತ್ರಗಳನ್ನು ನೀಡಬೇಕು. ಕೆಲಸದ ಸ್ಥಳಗಳಲ್ಲಿ ಅವರಿಗೆ ಪ್ರಾಧಾನ್ಯತೆ ಇರಬೇಕು. ಸರ್ಕಾರಿ ಕಚೇರಿಗಳಲ್ಲಿ ರ‌್ಯಾಂಪ್‌ಗಳನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು.
     ಅಂಗವಿಕಲರಿಗೆ ಶೇ. 5ರಷ್ಟು ಕನಿಷ್ಠ ಸೌಲಭ್ಯ ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು. ಅವರಿಗಾಗಿ ಸಾಕಷ್ಟು ಅನುದಾನ ಬರುತ್ತಿದ್ದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
     ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅವರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಅಂಗವಿಕಲರೇ ಕಾರ್ಯ ನಿರ್ವಹಿಸುವ ಹಲವು ಕೆಲಸಗಳಿದ್ದು ಹಾಜರಾತಿ ಹಾಕುವುದು ಹಾಗೂ ಕಾರ್ಮಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲು ಬಳಸಿಕೊಳ್ಳಬಹುದು ಎಂದು ಹೇಳಿದರು.
     ಕ್ರಿಯಾ ಯೋಜನೆ ತಯಾರಿಸುವಾಗ ಸ್ವಯಂ ಸೇವಾ ಸಂಸ್ಥೆಗಳು ಈ ಬಗ್ಗೆ ಮಾಹಿತಿ ನೀಡಿದರೆ ಗಮನ ಹರಿಸಲಾಗುವುದು ಎಂದು ತಾಲೂಕು ಪಂಚಾಯಿತಿ ಇಒ ರಾಮಭೋವಿ ತಿಳಿಸಿದರು.
     ಸ್ಫೂರ್ತಿ ಸಂಸ್ಥೆಯ ಸಿಇಒ ಕೆ.ಬಿ. ರೂಪಾನಾಯ್ಕ ಮಾತನಾಡಿ, ಅಂಗವಿಕಲರಿಗೆ ನಿಮ್ಮ ಕಾಳಜಿ, ಕನಿಕರ, ಭಿಕ್ಷೆ ಬೇಡ, ಅವರಿಗೆ ಸಲಕರಣೆ, ಸೌಲಭ್ಯ ನೀಡುವ ಮೂಲಕ ಕೆಲಸ ಕೊಡಿ ಎಂದು ಆಗ್ರಹಿಸಿದರು.
     ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಬಿ. ಮಲ್ಲಾನಾಯ್ಕ, ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜಿ. ಪ್ರಕಾಶ್, ಎನೇಬಲ್ ಇಂಡಿಯಾದ ಅಧಿಕಾರಿ ಸತ್ಯನಾರಾಯಣ, ಆರ್‌ಪಿಡಿ ಟಾಸ್ಕ್ ಫೋರ್ಸ್ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts