ಗುಂಡಿಬಿದ್ದ ರಸ್ತೆ ಡಾಂಬರ್​ ಕಾಣುವುದು ಯಾವಾಗ?

Published on

ದುರಸ್ತಿ ಭಾಗ್ಯ ಕಾಣದ ಚಾಕವೇಲು-ಬಿಳ್ಳೂರು ಮಾರ್ಗ ಕ್ಷೇತ್ರ ಮರುವಿಂಗಡಣೆ ಬಳಿಕ ಅಭಿವೃದ್ಧಿ ಕುಂಠಿತ

ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ

ತಾಲೂಕಿನ ಚಾಕವೇಲು& ಬಿಳ್ಳೂರು ಮಾರ್ಗದಲ್ಲಿ ರಸ್ತೆಗೆ ಹಾಕಿರುವ ಡಾಂಬರ್​ಕಿತ್ತು ದಶಕಗಳೇ ಕಳೆಯುತ್ತಿದ್ದರೂ ದುರಸ್ತಿಗೆ

ಅಭಿವೃದ್ಧಿಯ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ.

ಚಾಕವೇಲು ಗ್ರಾಪಂ ಕೇಂದ್ರದಿಂದ ಬಿಳ್ಳೂರಿಗೆ ತೆರಳುವ ರಾಶ್ಚೇರುವು ಕೊಂಡೋರುಪಲ್ಲಿ ಮಾರ್ಗದ 8 ಕಿಮೀ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹದಗೆಟ್ಟು ಕೆಸರು ಗದ್ದೆಯಂತಾಗಿದೆ. ಈ ರಸ್ತೆ ಮಾರ್ಗದಲ್ಲಿ ಸಂಚರಿಸುವ ಬಸ್​, ತರಕಾರಿ, ಹಾಲು ಸರಬರಾಜು ವಾಹನಗಳು ಸೇರಿ ಆಟೋ, ಬೈಕ್​ ಸವಾರರು ನಿತ್ಯ ನರಕ ಅನುಭವಿಸುತ್ತಿದ್ದಾರೆ.

ರಾಶ್ಚೇರುವು ಗ್ರಾಪಂ ವ್ಯಾಪ್ತಿಯ ರಾಶ್ಚೇರುವು&ಕೊಂಡೋರುಪಲ್ಲಿ ಮುಖ್ಯರಸ್ತೆ, ಚಾಕವೇಲು&ಬಿಳ್ಳೂರು ಮುಖ್ಯರಸ್ತೆ, ಆಂಧ್ರದ ಗಡಿಯ ಮಂಜುನಾಥಪುರ ಕೊಟ್ಟಂಪಲ್ಲಿ ಮಾರ್ಗ ರಸ್ತೆ ಸೇರಿ ಬಹುತೇಕ ರಸ್ತೆಗಳು ಹದಗೆಟ್ಟಿವೆ.ಇದೆಲ್ಲವನ್ನು ಗಮನಿಸಿದರೆ ದುರಸ್ತಿಗೆ ಮುಂದಾಗಬೇಕಾದಜನಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳು ಗಾಡ ನಿದ್ರೆಗೆ ಜಾರಿದಂತಿದೆ. ಚೇಳೂರು ತಾಲೂಕು 25 ವರ್ಷಗಳ ಹಿಂದೆ ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡಿದ್ದು, ಚಾಕವೇಲು, ರಾಶ್ಚೇರುವು ಗ್ರಾಪಂ ಸುತ್ತಮುತ್ತಲಿನ ಹಳ್ಳಿಗಳಿಗೆ ಸಂಪರ್ಕಿಸುವ ರಸ್ತೆಗೆ ಅಂದಿನ ಶಾಸಕ ಎ.ಚೌಡರೆಡ್ಡಿ, ಕೆ.ಎಂ.ಕೃಷ್ಣಾರೆಡ್ಡಿ ಅವಧಿಯಲ್ಲಿ ಡಾಂಬರು ಹಾಕಿರುವುದು ಬಿಟ್ಟರೆ, ಕ್ಷೇತ್ರ ಮರುವಿಂಗಡಣೆ ನಂತರ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಚೇಳೂರು ಹೋಬಳಿ ವ್ಯಾಪ್ತಿಯ ಹಳ್ಳಿಗಳು ಅಭಿವೃದ್ಧ್ದಿಯಿಂದ ವಂಚಿತಗೊಂಡಿವೆ. ಇದರ ಪರಿಣಾಮವೇ ಗ್ರಾಮೀಣ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿವೆ.

ರಾಶ್ಚೇರುವು ಗ್ರಾಪಂ ಕೇಂದ್ರದಿಂದ ಕೊಂಡೋರುಪಲ್ಲಿ ಗ್ರಾಮ ಮಾರ್ಗವಾಗಿಬಾಗೇಪಲ್ಲಿಗೆ ತೆರಳುವ ಮುಖ್ಯರಸ್ತೆಯಲ್ಲಿ ಬೃಹತ್​ ಗಾತ್ರದ ಗುಂಡಿಗಳು ಬಿದ್ದಿವೆ. ಬಹುತೇಕ ಕಡೆ ರಸ್ತೆ ಕೊಚ್ಚಿ ಹೋಗಿ ಕಂದಕಗಳು ಏರ್ಪಟಿದ್ದು, ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತಕ್ಕೀಡಾಗುತ್ತಾರೆ. ಇನ್ನಾದರೂ ರಸ್ತೆ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.

| ಎಸ್​.ಆರ್​.ಲಕ್ಷಿ$್ಮನಾರಾಯಣ ಮುಖಂಡರು ರಾಶ್ಚೇರುವು

ಚೇಳೂರು ಹೋಬಳಿ ಯನ್ನು ತಾಲೂಕನ್ನಾಗಿ ಘೋಷಣೆ ಮಾಡಿ 4 ವರ್ಷ ಕಳೆದಿದೆ. ಘೋಷಣೆ ಹೆಸರಿಗಷ್ಟೇ ಸೀಮಿತಗೊಂಡಿದ್ದು, 2 ದಶಕಗಳ ಹಿಂದೆ ರಸ್ತೆಗಳ ಪರಿಸ್ಥಿತಿ ಹೇಗಿತ್ತೋ ಇಂದಿಗೂ ಅದೇ ಪರಿಸ್ಥಿತಿಯಲ್ಲಿವೆ. ತಾಲೂಕು ಘೋಷಿಸಿದ ನಂತರವಾದರೂ ರಸ್ತೆ ಸಮಸ್ಯೆಗಳ ಬಗ್ಗೆ ಸ್ಥಳಿಯ ಶಾಸಕರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹದಗೆಟ್ಟ ರಸ್ತೆಗಳ ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವಿಶೇಷ ಅನುದಾನ ತಂದು ಸುಧಾರಣೆಗೆ ಕ್ರಮ ವಹಿಸಬೇಕು.

| ಪಿ.ಎಸ್​.ವೆಂಕಟರೆಡ್ಡಿ, ಮಾಜಿ ಅಧ್ಯಕ್ಷ, ಚಾಕಲವೇಲು ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net