ಭಗವಂತನ ಸಾಕ್ಷಾತ್ಕಾರವಿದ್ದಾಗ ದೇಗುಲ ಕಾರ್ಯ ಪೂರ್ಣ

byn
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಕರಾವಳಿ ಪ್ರದೇಶವು ಪವಿತ್ರ ಕಾರಣಿಕ ಸ್ಥಳಗಳನ್ನು ಹೊಂದಿದೆ. ಇಲ್ಲಿನ ಪ್ರಸಿದ್ಧ ದೇವಾಲಯಗಳು ಕೂಡ ಅದರದ್ದೇ ಆಗಿರುವ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಭಗವಂತನ ಸಾಕ್ಷಾತ್ಕಾರವಿದ್ದಾಗ ಮಾತ್ರ ಪ್ರತೀ ದೇಗುಲಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ. ದೇವಸ್ಥಾನದ ಅಭಿವೃದ್ಧಿ ಊರಿಗೆ ಶ್ರೇಯಸ್ಸು ತರುತ್ತದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಶಿರೂರು ಮೇಲ್ಪಂಕ್ತಿ ಐತಿಹಾಸಿಕ ಪ್ರಸಿದ್ಧ ಶ್ರೀ ಎರಗೇಶ್ವರ ದೇವಸ್ಥಾನದ ಶ್ರೀ ಗಣಪತಿ ದೇವರು, ಶ್ರೀ ದುರ್ಗಾಪರಮೇಶ್ವರಿ ಹಾಗೂ ಧ್ವಜೇಶ್ವರನ ಪ್ರತಿಷ್ಠಾಪನೆ ಹಾಗೂ ಶಿಲಾಮಯ ರಾಜಗೋಪುರ, ಹೆಬ್ಬಾಗಿಲು ಮತ್ತು ಉತ್ತರಪೌಳಿಯ ಲೋಕಾರ್ಪಣೆ ಪ್ರಯುಕ್ತ ನಡೆದ ಧಾರ್ಮಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೋಣೆಮನೆ ನಾಗಪ್ಪಯ್ಯ ಆಚಾರ್, ಶಿರೂರು ಗ್ರಾ.ಪಂ. ಅಧ್ಯಕ್ಷೆ ನಾಗರತ್ನಾ ಆಚಾರ್ಯ, ಭಟ್ಕಳ ಕಾಳಿಕಾಂಬಾ ದೇವಸ್ಥಾನದ ಒಂದನೇ ಆಡಳಿತ ಮೊಕ್ತೇಸರ ಗಜಾನನ ಆಚಾರ್ಯ, ತಾ.ಪಂ. ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಬಾಲಕೃಷ್ಣ ಎನ್.ಆಚಾರ್ಯ ಮಠದಮನೆ, ನಾಗಪ್ಪ ವಿ.ಗಾಣಿಗ ನಾಕಟ್ಟೆ, ಡಾ.ಯು.ಮಾಧವ ಶೆಟ್ಟಿ, ಶಿರೂರು ಗ್ರಾ.ಪಂ. ಸದಸ್ಯರಾದ ಉದಯ ಪೂಜಾರಿ ಮೈದಿನಪುರ, ಪ್ರಸನ್ನ ಕುಮಾರ್ ಶೆಟ್ಟಿ, ನಿವೃತ್ತ ಶಿಕ್ಷಕ ರಾಮಕೃಷ್ಣ ಡಿ., ಮಂಜುನಾಥ ಆಚಾರ್ಯ, ನರಸಿಂಹ ಆಚಾರ್ಯ, ಶ್ರೀಧರ ಆಚಾರ್ಯ, ರತ್ನಾಕರ ಆಚಾರ್ಯ, ತಿಮ್ಮಪ್ಪಯ್ಯ ಆಚಾರ್ಯ, ಉದ್ಯಮಿ ಜಯಂತ ಪೂಜಾರಿ ಮೇಲ್ಪಂಕ್ತಿ ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಶಾಂತಾನಂದ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಸುಜಾತಾ ಎಸ್.ಆಚಾರ್ಯ ಸ್ವಾಗತಿಸಿದರು. ಶಿಕ್ಷಕರಾದ ಸಿ.ಎನ್.ಬಿಲ್ಲವ ಹಾಗೂ ಪ್ರಭಾಕರ ಬಿಲ್ಲವ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಎಚ್.ಚಂದ್ರಶೇಖರ ಶೆಟ್ಟಿ ರಜತಾದ್ರಿ ವಂದಿಸಿದರು.

ಸನ್ಮಾನ

ಹಿರಿಯರಾದ ಸಂಜೀವ ಶೆಟ್ಟಿ ಭದ್ರಶೆಟ್ರಮನೆ, ಶಿಲ್ಪಿ ವಿಶ್ವನಾಥ ಕಾಬೆಟ್ಟು ಕಾರ್ಕಳ, ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ಧನಸಹಾಯ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net