ಮನೆ ಮಂದಿ ಎಚ್ಚೆತ್ತಾಗ ಕಳ್ಳ ಪರಾರಿ

Published on

ಉಪ್ಪಿನಂಗಡಿ: ಇಚ್ಲಂಪಾಡಿ ಗ್ರಾಮದ ಮಾನಡ್ಕ ಎಂಬಲ್ಲಿ ಮೋಹಿನಿ ಎಂಬುವರ ಮನೆಗೆ ನುಗ್ಗಿದ ಕಳ್ಳ ತಡರಾತ್ರಿ 1.30ರ ಸುಮಾರಿಗೆ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿ ಅಡ್ಡಾಡುತ್ತಿರುವಾಗ ಮನೆ ಯಜಮಾನಿ ಎಚ್ಚರಗೊಂಡು ಮನೆ ಮಂದಿಯನ್ನು ಎಬ್ಬಿಸಿದಾಗ ಕಳ್ಳ ಓಡಿ ಪರಾರಿಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ರಾತ್ರಿ 1.30ರ ಸುಮಾರಿಗೆ ಯಾರೋ ಮನೆಯಲ್ಲಿ ಅಡ್ಡಾಡುತ್ತಿರುವುದನ್ನು ಮೋಹಿನಿ ಗಮನಿಸಿ ಗಂಡ ಹಾಗೂ ಮಗಳನ್ನು ಎಬ್ಬಿಸಿ ಬೊಬ್ಬೆ ಹೊಡೆದಾಗ ಮನೆಯ ಹಿಂಬದಿ ಬಾಗಿಲ ಮೂಲಕ ಕಳ್ಳ ಓಡಿ ಪರಾರಿಯಾಗಿದ್ದಾನೆ. ಉಪ್ಪಿನಂಗಡಿ ಪೊಲೀಸರಿಂದ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net