ಮದುವೆಗು ಮುನ್ನ ಡಿಕೆಶಿ ಪುತ್ರಿ ಹಠ ಹಿಡಿದಿದ್ದೇಕೆ? ಕೊನೆಗೂ ತನ್ನ ಹಠ ಸಾಧಿಸಿದ ಐಶ್ವರ್ಯಾ!

Aishwarya
Published on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಪುತ್ರಿ ಐಶ್ವರ್ಯಾ ಮತ್ತು ಮಾಜಿ ಸಿಎಂ ಎಸ್.ಎಂ.ಕೃಷ್ಣ ಮೊಮ್ಮಗ ಅಮಾರ್ಥ್ಯ ಹೆಗ್ಡೆಯ ವಿವಾಹ ಸಮಾರಂಭ ಕುಟುಂಬ, ಬಂಧು-ಬಳಗ ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ, ಶಾಸ್ತ್ರೋಕ್ತವಾಗಿ ಪ್ರೇಮಿಗಳ ದಿನದಂದೇ ನೆರವೇರಿದೆ.

ವೈಟ್​ಫೀಲ್ಡ್ ಬಳಿಯಿರುವ ರೆಸಾರ್ಟ್​ನಲ್ಲಿ ವಿವಾಹ ಸಮಾರಂಭ ಇಂದು ನಡೆದಿದೆ. ಬೆಳಗ್ಗೆ 9 ಗಂಟೆ 24 ನಿಮಿಷಕ್ಕೆ ಐಶ್ವರ್ಯಾಗೆ ಮಾಂಗಲ್ಯ ಧಾರಣೆಯಾಗಿದೆ. ಸಮಾರಂಭಕ್ಕೆ ಸುಮಾರು 1500 ಮಂದಿ ಸಾಕ್ಷಿಯಾಗಿದ್ದಾರೆ. ಪ್ರೇಮಿಗಳ ದಿನದಂದೇ ಐಶ್ವರ್ಯಾ ಮದುವೆ ನೆರವೇರಲು ಒಂದು ಕಾರಣವಿದೆ. ಆ ಕಾರಣವೇ ಐಶ್ವರ್ಯಾ.

ಹೌದು. ಮಗಳ ಒತ್ತಾಯಕ್ಕೆ ಮಣಿದು ಫೆ. 14ರಂದೇ ಡಿಕೆಶಿ ತಮ್ಮ ಮಗಳ ಮದುವೆ ಮಾಡಿಕೊಟ್ಟಿದ್ದಾರೆ. ಪ್ರೇಮಿಗಳ ದಿನವೇ ಮದುವೆ ಆಗಬೇಕೆಂದು ಐಶ್ವರ್ಯಾ ಹಠ ಹಿಡಿದಿದ್ದರಂತೆ. ಕೊನೆಗೂ ಐಶ್ವರ್ಯಾ ತನ್ನ ಹಠ ಸಾಧಿಸಿದ್ದಾರೆ. ಮಗಳು ಇಷ್ಟಪಟ್ಟಂತೆಯೇ ಪ್ರೇಮಿಗಳ ದಿನದಂದು ಮದುವೆಯನ್ನು ಶಾಸ್ತ್ರೋಕ್ತವಾಗಿ, ಬಹಳ ವಿಜೃಂಭಣೆಯಿಂದ ನೇರವೇರಿಸಿಕೊಟ್ಟಿದ್ದಾರೆ.

ಇನ್ನು ಮದುವೆ ಸಮಾರಂಭದಲ್ಲಿ ನಿರ್ಮಲಾನಂದ ಶ್ರೀಗಳು, ವಿನಯ್ ಗುರುಜೀ, ಶಾಸಕ ಮುನಿರತ್ನ, ಮಲ್ಲಿಕಾರ್ಜುನ್ ಖರ್ಗೆ, ನೊಣವಿನಕೆರೆ ಮಠದ ಶ್ರೀಗಳು, ಸೋಮಣ್ಣ, ಮಾಜಿ ಡಿಸಿಎಂ ಪರಮೇಶ್ವರ್, ಕರವೇ ನಾರಾಯಣಗೌಡ, ನಂಜಾವದೂತ ಶ್ರೀಗಳು, ಮಾಜಿ ರಾಜ್ಯಸಭೆ ಸದಸ್ಯ ಪ್ರಭಾಕರ್ ಕೊರೆ, ಸಿದ್ದರಾಮಯ್ಯ, ಸಿಎಂ ಬಿ.ಎಸ್ ಯಡಿಯೂರಪ್ಪ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಎಚ್ ಮುನಿಯಪ್ಪ, ಬೈರತಿ ಸುರೇಶ್ ಹಾಗೂ ನಟ ಪುನೀತ್​​​ ರಾಜ್​ಕುಮಾರ್​ ಸೇರಿದಂತೆ ಹಲವು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net