ಉಪಕದನದ ಆಕಾಂಕ್ಷಿ ಸಿಪಿವೈ ನಡೆಯೇನು?

HDK CPY NK
Published on

* ತಾಲೂಕಿನ ರಾಜಕೀಯ ಪಡಸಾಲೆಯಲ್ಲಿ ತರಹೇವಾರಿ ಚರ್ಚೆ

* ಟಿಕೆಟ್​ ದಕ್ಕದಿದ್ದರೂ ಚುನಾವಣೆಯಲ್ಲಿ ಸ್ಪರ್ಧೆಗೆ ನಿರ್ಧಾರ

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಉಪಕದನದ ಪ್ರಬಲ ಸ್ಪರ್ಧಾಕಾಂ ಆಗಿರುವ ಸಿ.ಪಿ.ಯೋಗೇಶ್ವರ್​ ಅವರ ನಡೆಯೇನು ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ತಾಲೂಕಿನ ರಾಜಕೀಯ ಪಡಸಾಲೆಯಲ್ಲಿ ತರಹೇವಾರಿ ಚರ್ಚೆಗಳು ಆರಂಭಗೊಂಡಿವೆ.

ಮುಂಬರುವ ಉಪಚುನಾವಣೆಯಲ್ಲಿ ಎನ್​ಡಿಎ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲೇಬೇಕು ಎಂಬುದು ಯೋಗೇಶ್ವರ್​ ಮನದಿಂಗಿತವಾಗಿದೆ. ಟಿಕೆಟ್​ ದಕ್ಕದಿದ್ದರೂ ಸ್ಪರ್ಧಿಸುವ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಮೈತ್ರಿ ಪಕ್ಷದ ಟಿಕೆಟ್​ ದಕ್ಕದಿದ್ದರೆ ಯೋಗೇಶ್ವರ್​ ಆರಿಸಿಕೊಳ್ಳುವ ಪರ್ಯಾಯ ಮಾರ್ಗ ಯಾವುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮೈತ್ರಿ ಟಿಕೆಟ್​ಗೆ ಕಸರತ್ತು?

ರಾಜ್ಯದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆಗಳು ನಡೆಯಲಿದ್ದು, ಮೈತ್ರಿ ಧರ್ಮಪಾಲನೆ ಹಿನ್ನೆಲೆಯಲ್ಲಿ ಮೂರರ ಪೈಕಿ ಚನ್ನಪಟ್ಟಣ ಕ್ಷೇತ್ರ ಜೆಡಿಎಸ್​ ಪಾಲಾಗುತ್ತದೆ ಎನ್ನಲಾಗಿದೆ. ಜೆಡಿಎಸ್​ ಯುವನಾಯಕ ನಿಖಿಲ್​ ಕುಮಾರಸ್ವಾಮಿ ಕ್ಷೇತ್ರದಲ್ಲಿ ಪ್ರವಾಸ ನಡೆಸುತ್ತಿರುವುದು ಇದಕ್ಕೆ ಪುಷ್ಟಿ ನೀಡಿದೆ. ಇದರ ಮಧ್ಯೆಯೂ ಟಿಕೆಟ್​ಗಾಗಿ ಯೋಗೇಶ್ವರ್​ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮೈತ್ರಿ ಪಾಲನೆಯ ಹೊರತಾಗಿಯೂ ಕ್ಷೇತ್ರದ ಟಿಕೆಟ್​ ನನಗೆ ಸಿಗಲಿದೆ ಎಂಬ ಅದಮ್ಯ ವಿಶ್ವಾಸದಲ್ಲಿದ್ದಾರೆ. ಟಿಕೆಟ್​ ಗಿಟ್ಟಿಸಿಕೊಳ್ಳಲು ನಾನಾ ಪ್ರಯತ್ನ ನಡೆಸುತ್ತಿದ್ದಾರೆ. ಸೋಮವಾರ ಸಂಜೆ ಮತ್ತೊಮ್ಮೆ ದೆಹಲಿಗೂ ತೆರಳುತ್ತಿದ್ದಾರೆ. ತಮ್ಮ ಆಪ್ತ ಮುಖಂಡರ ಮೂಲಕ ಪದ ವರಿಷ್ಠರಿಗೆ ಒತ್ತಡ ಹಾಕಿಸುತ್ತಿದ್ದಾರೆ. ಇದರ ಹೊರತಾಗಿಯೂ, ಟಿಕೆಟ್​ ಸಿಗದಿದ್ದರೆ ಮುಂದಿನ ದಾರಿಯೇನು? ಎಂಬ ಚಿಂತನೆಯಲ್ಲಿದ್ದಾರೆ. ಇದಕ್ಕಾಗಿ ಪದ ಮುಖಂಡರು ಹಾಗೂ ಕಾರ್ಯಕರ್ತರ ಮೊರೆ ಹೋಗಿದ್ದಾರೆ.

ನಿರಂತರ ಸಭೆ!

ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ನೂರಕ್ಕೆ ನೂರು ಖಚಿತ ಎಂಬ ನಿರ್ಧಾರವನ್ನು ಯೋಗೇಶ್ವರ್​ ಈಗಾಗಲೇ ಘೋಷಿಸಿದ್ದಾರೆ. ಒಂದುವೇಳೆ ಮೈತ್ರಿ ಟಿಕೆಟ್​ ವಂಚಿತವಾದರೆ ಮುಂದಿನ ದಾರಿ ಆಯ್ಕೆಗೆ ಈಗಾಗಲೇ ಅರ್ಲಟ್​ ಆಗಿದ್ದಾರೆ. ಇದಕ್ಕಾಗಿ ಕಳೆದ ಬುಧವಾರದಿಂದ ನಗರದ ಐದನೇ ಅಡ್ಡ ರಸ್ತೆಯಲ್ಲಿರುವ ತಮ್ಮ ಗೃಹಕಚೇರಿಯಲ್ಲಿ ಪದ ಮುಖಂಡರು ಹಾಗೂ ಕಾರ್ಯಕರ್ತರ ಜತೆ ನಿರಂತರವಾದ ಸಭೆ ನಡೆಸುತ್ತಿದ್ದಾರೆ. ಗ್ರಾಪಂವಾರು ಮುಖಂಡರನ್ನು ಕರೆದು ಈ ಬಗ್ಗೆ ವಿಸತವಾದ ಚರ್ಚೆ ಮಾಡುತ್ತಿದ್ದಾರೆ. ಅಪ್ಪಿತಪ್ಪಿ ಟಿಕೆಟ್​ ಸಿಗದಿದ್ದರೆ ಏನು ಮಾಡೋಣ ಎಂಬ ಸಲಹೆಯನ್ನು ಕೇಳುತ್ತಿದ್ದಾರೆ. ಈಗಾಗಲೇ ಬಹುತೇಕ ಗ್ರಾಪಂಗಳ ಸಭೆ ಮುಕ್ತಾಯವಾಗಿವೆ. ಆದರೆ, ಈ ಸಭೆಯಲ್ಲೂ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ.

ಕಾಂಗ್ರೆಸ್​ ಅಥವಾ ಪಕ್ಷೇತರ?

ನಿಮಗೆ ಟಿಕೆಟ್​ ಕೊಡುವುದಿಲ್ಲ ಎನ್ನುವುದಾದರೆ ಕಾಂಗ್ರೆಸ್​ ಸೇರುವುದು ಉತ್ತಮ..., ಕಾಂಗ್ರೆಸ್​ಗೆ ಹೋದರೆ ಗೆಲುವು ಸುಲಭ..., ನಿಮ್ಮನ್ನು ದುಡಿಸಿ ಕೈ ಕೊಟ್ಟವರಿಗೆ ಬುದ್ದಿ ಕಲಿಸಲು ಕಾಂಗ್ರೆಸ್ಸೇ ಸರಿ.., ಇಲ್ಲವಾದರೆ, ಪೇತರರಾಗಿ ನಿಂತುಕೊಳ್ಳಿ, ಎರಡು ಪಗಳಿಗೂ ಮಣ್ಣು ಮುಕ್ಕಿಸೋಣ. ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಿ, ನಾವು ನಿಮ್ಮ ಜತೆ ಇರುತ್ತೇವೆ. ಇವು, ಯೋಗೇಶ್ವರ್​ ನಡೆಸುತ್ತಿರುವ ಗ್ರಾಪಂವಾರು ಮುಖಂಡರ ಸಭೆಗಳಲ್ಲಿ ಕೇಳಿ ಬರುತ್ತಿರುವ ಮಾತುಗಳು. ಬಲ್ಲಮೂಲಗಳ ಪ್ರಕಾರ ಯೋಗೇಶ್ವರ್​ ನಡೆಸುತ್ತಿರುವ ಸಭೆಯಲ್ಲಿ ಬಹುತೇಕರು ಕಾಂಗ್ರೆಸ್​ ಸೇರಲು ಸಲಹೆ ನೀಡುತ್ತಿದ್ದಾರೆ ಎನ್ನಲಾಗಿದ್ದು, ಕೆಲವೇ ಮಂದಿ ಮಾತ್ರ ಪೇತರರಾಗಲು ಸೂಚಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಯೋಗೇಶ್ವರ್​ ಮಾತ್ರ ನನಗೆ ಮೈತ್ರಿಯಲ್ಲಿಯೇ ಟಿಕೆಟ್​ ಸಿಗಲಿದೆ. ಟಿಕೆಟ್​ ತಪ್ಪಿದರೆ ಎರಡರಲ್ಲಿ ಒಂದನ್ನು ಆರಿಸಿಕೊಳ್ಳೋಣ ಎಂಬ ನಿಲುವಿಗೆ ಬದ್ಧರಾಗಿದ್ದಾರೆ ಎನ್ನಲಾಗಿದೆ.

ದೆಹಲಿಯಿಂದ ಬಂದಮೇಲೆ ಅಂತಿಮ?

ದೆಹಲಿಯಿಂದ ಬಂದ ಬಳಿಕ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಲಿದೆ. ಯೋಗೇಶ್ವರ್​ ಮೈತ್ರಿ ಟಿಕೆಟ್​ಗೆ ತೀವ್ರ ಆಸಕ್ತಿ ತೋರಿಸುತ್ತಿದ್ದು, ಟಿಕೆಟ್​ ಸಿಗುವುದೋ? ಇಲ್ಲವೋ ಎಂಬುದು ದೆಹಲಿಯಲ್ಲಿ ಖಾತ್ರಿಯಾಗಲಿದೆ ಎನ್ನಲಾಗಿದೆ. ಒಂದುವೇಳೆ ಟಿಕೆಟ್​ ಕೈ ತಪ್ಪಿದರೆ ಯಾವುದಾದರೂ ರಾಷ್ಟ್ರೀಯ ಪಕ್ಷ  ಚಿಹ್ನೆಯಡಿ ಸ್ಪರ್ಧೆ ಖಚಿತ ಎಂಬ ಮಾಹಿತಿ ಬಲ್ಲಮೂಲಗಳಿಂದ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net