ನಿವೃತ್ತ ಯೋಧನಿಗೆ ಸ್ವಾಗತ

ನಿವೃತ್ತ ಯೋಧನಿಗೆ ಸ್ವಾಗತ
Published on

ಸಿದ್ದಾಪುರ: ಭಾರತೀಯ ಸೇನೆಯಲ್ಲಿ 22ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿ ಸ್ವ-ಗ್ರಾಮಕ್ಕೆ ಹಿಂದಿರುಗಿದ ನವೀನ್ ಪೊನ್ನಪ್ಪ ಅವರನ್ನು ಗ್ರಾಮಸ್ಥರು ಮೆರವಣಿಗೆ ಮೂಲಕ ಸ್ವಾಗತಿಸಿದರು.

ವಿರಾಜಪೇಟೆ ತಾಲೂಕಿನ ಚೆನ್ನಯ್ಯಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೂರು ಗ್ರಾಮದ ಯೋಧ ನವೀನ್ ಪೊನಪ್ಪ ಹೊಸೋಕ್ಲು ಹಾಗೂ ಅವರ ಪತ್ನಿ ಚೈತ್ರ ಅವರನ್ನು ಗ್ರಾಮದ ನಾಗ ದೇವಸ್ಥಾನದಿಂದ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ಗ್ರಾಮಸ್ಥರು ನವೀನ್ ಪೊನ್ನಪ್ಪ ಅವರಿಗೆ ಆರತಿ ಎತ್ತಿ, ಹೂ ಮಳೆ ಹಾಗೂ ಚಂಡೆ ವಾದ್ಯದ ಮೂಲಕ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ಗ್ರಾಮದ ಪದ್ಮೇಶ, ಜಗ, ಮರಿ, ಚಿಪ್ಪಣ, ಚಿತ್ರು, ವಿಶು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net