ಸುಳ್ಯ: ಪುತ್ತೂರಿನಿಂದ ಸಂಜೆ ಬೆಳ್ಳಾರೆ ಮಾರ್ಗವಾಗಿ ಸಂಚರಿಸಿ ಪೈಲಾರಿನಲ್ಲಿ ನಿಲುಗಡೆಗೊಳ್ಳುತಿದ್ದ ಸರ್ಕಾರಿ ಬಸ್ ಎಲಿಮಲೆಗೆ ವಿಸ್ತರಣೆಗೊಂಡಿದ್ದು, ಎಲಿಮಲೆ ಗ್ರಾಮಸ್ಥರು ವಿಸ್ತರಣೆಗೊಂಡ ಬಸ್ಸನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಈ ಬಸ್‌ನ ಸಂಚಾರವನ್ನು ಎಲಿಮಲೆವರೆಗೆ ವಿಸ್ತರಿಸಲು ಜಯರಾಮ ಶೆಟ್ಟಿ ಮರ್ಗಿಲಡ್ಕ, ಜಯಾನಂದ ಪಟ್ಟೆ, ಚೈತನ್ಯ ದೀಕ್ಷಿತ್ ಕೆಳಪಾರೆ, ಬಾಲಚಂದ್ರ ಮೋಂಟಡ್ಕ, ಮೋಹಿತ್ ಹರ್ಲಡ್ಕ ಸೇರಿದಂತೆ ಹಲವರು ಕಾಂಗ್ರೆಸ್ ಮುಖಂಡರು, ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ಮುಖಾಂತರ ಪ್ರಯತ್ನ ನಡೆಸಿದ್ದರು.
ಮಾ.18ರಂದು ರಾತ್ರಿ ಎಲಿಮಲೆಗೆ ಆಗಮಿಸಿದ ಬಸ್ಸನ್ನು ಎಲಿಮಲೆಯಲ್ಲಿ ಮುಖಂಡರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ, ರಾಧಾಕೃಷ್ಣ ಬೊಳ್ಳೂರು, ಎ.ವಿ.ತೀರ್ಥರಾಮ, ವೇಣುಗೋಪಾಲ ಪುಕ್ಕುಟ್ಟಿ, ವಿಷ್ಣು ಭಟ್ ಮೂಲೆತೋಟ, ಜಯಾನಂದ ಪಟ್ಟೆ, ಧನಂಜಯ ಕೋಟೆಮೂಲೆ, ಮೋಹಿತ್ ಹರ್ಲಡ್ಕ ಮೊದಲಾದವರು ಸ್ವಾಗತಿಸಿದರು. ರಾಧಾಕೃಷ್ಣ ಬೊಳ್ಳೂರು ತೆಂಗಿನಕಾಯಿ ಒಡೆದು ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
ಪ್ರಮುಖರಾದ ಕೃಷ್ಣಪ್ರಸಾದ್ ಪಾರೆ, ಮುರಳೀಧರ ಕೋಡ್ತುಗುಳಿ, ಗಣೇಶ್ ಭಟ್ ಹೊನ್ನಡಿ, ರಾಜಕುಮಾರ್ ಅಂಬೆಕಲ್ಲು, ಹೇಮನಾಥ ಕೋಡ್ತುಗುಳಿ, ಸತ್ಯನಾರಾಯಣ ಭಟ್ ಹೊನ್ನಡಿ, ವಿಷ್ಣು ಪ್ರಸಾದ್ ಹೊನ್ನಡಿ, ಚೈತನ್ಯ ದೀಕ್ಷಿತ್ ಕೆಳಪಾರೆ, ಜಯರಾಮ ಶೆಟ್ಟಿ ಮರ್ಗಿಲಡ್ಕ, ಬಾಲಚಂದ್ರ ಮೋಂಟಡ್ಕ ಹಾಗೂ ಪೈಲಾರು, ಗುಡ್ಡೆಮನೆ, ಕೋಡ್ತುಗುಳಿ ಹಾಗೂ ಮರ್ಗಿಲಡ್ಕ, ಬಾಜಿನಡ್ಕ, ಹೊನ್ನಡಿ, ಜಬಳೆ ಮತ್ತು ಎಲಿಮಲೆ ಗ್ರಾಮಸ್ಥರು ಉಪಸ್ಥಿತರಿದ್ದರು.