ಸಂವಿಧಾನ ಜಾಗೃತಿ ರಥಕ್ಕೆ ಸ್ವಾಗತ

ಸಂವಿಧಾನ ಜಾಗೃತಿ ರಥಕ್ಕೆ ಸ್ವಾಗತ
Published on

ವಿರಾಜಪೇಟೆ: ಇಲ್ಲಿನ ಪಂಜರ್‌ಪೇಟೆಯಲ್ಲಿ ಸಂವಿಧಾನ ಜಾಗೃತಿ ರಥವನ್ನು ಭಾನುವಾರ ಸ್ವಾಗತಿಸಲಾಯಿತು.

ವಿರಾಜಪೇಟೆ ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರಥಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ವಿರಾಜಪೇಟೆಯ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡು ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಪ್ರದರ್ಶನ ಮಾಡಿದರು.

ಪುರಸಭಾ ಮುಖ್ಯಾಧಿಕಾರಿ ಚಂದ್ರಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಸಮಾಜ ಕಲ್ಯಾಣಾಧಿಕಾರಿ ಪ್ರೀತಿ ಚಿಕ್ಕ ಮಾದಯ್ಯ, ಬಾಲಸುಬ್ರಹ್ಮಣ್ಯ, ಪುರಸಭಾ ಸದಸ್ಯ ಜೂನಾ, ರಜನಿಕಾಂತ್, ಮಹಮದ್ ರಾಫಿ, ತಬಸುಮ್, ಸುಭಾಷ್, ಆಗಸ್ಟಿನ್ ಬೆನ್ನಿ, ಪೂರ್ಣಿಮಾ, ವಿರಾಜಪೇಟೆ ನಗರದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ , ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net