ಸುತ್ತೂರು ಯಾತ್ರಾ ರಥಕ್ಕೆ ಸ್ವಾಗತ

18-pnp 2
ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸಂಚರಿಸುತ್ತಿರುವ ಯಾತ್ರಾ ರಥವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ ಪಾಂಡವಪುರ ಪಟ್ಟಣದಲ್ಲಿ ಬರಮಾಡಿಕೊಂಡರು. ನಿರಂಜನ್ ಬಾಬು, ಸಿ.ಆರ್.ರಮೇಶ್, ಅಮೃತಿ ರಾಜಶೇಖರ್ ಇತರರು ಇದ್ದರು.
Published on

ಪಾಂಡವಪುರ: ಸುತ್ತೂರು ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಯಾತ್ರಾ ರಥವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ ಗುರುವಾರ ಬರಮಾಡಿಕೊಂಡರು.

ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, ಶಿವರಾತ್ರೀಶ್ವರ ಮಹಾಸ್ವಾಮೀಜಿ ಅವರ ಕೃಪೆಯಿಂದ ಸುತ್ತೂರು ಕ್ಷೇತ್ರ ಇಷ್ಟು ಎತ್ತರಕ್ಕೆ ಬೆಳೆದಿದೆ. ಕ್ಷೇತ್ರದ ಬೆಳವಣಿಗೆಗೆ ರಾಜೇಂದ್ರ ಸ್ವಾಮೀಜಿಯಾದಿಯಾಗಿ ಅನೇಕ ಸ್ವಾಮೀಜಿಗಳು ಶ್ರಮಿಸಿದ್ದಾರೆ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಕೂಡ ರಾಜ್ಯ ಅಲ್ಲದೆ ಹೊರ ರಾಜ್ಯಗಳಲ್ಲೂ ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳನ್ನು ಸ್ಥಾಪಿಸಿ ಜ್ಞಾನ ಮತ್ತು ಆರೋಗ್ಯ ಕಾಪಾಡುತ್ತಿದ್ದಾರೆ. ದೇಶಿಕೇಂದ್ರ ಸ್ವಾಮೀಜಿಯ ಕಾಯಕ ಪ್ರತಿಯೊಬ್ಬ ಸನ್ಯಾಸಿಗಳಿಗೂ ಮಾರ್ಗದರ್ಶನವಾಗಿದೆ ಎಂದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸುತ್ತೂರು ಜಾತ್ರಾ ಪ್ರಯುಕ್ತ ಸಂಚರಿಸುತ್ತಿರುವ ಜಾತ್ರಾ ರಥವನ್ನು ಎಲ್ಲ ಭಕ್ತಾದಿಗಳು ಶ್ರದ್ಧೆಯಿಂದ ಬರಮಾಡಿಕೊಂಡಿದ್ದೇವೆ. ಪ್ರತಿವರ್ಷದಂತೆ ಈ ವರ್ಷವೂ ಜರುಗುತ್ತಿರುವ ಸುತ್ತೂರು ಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ಎಲ್ಲ ಭಕ್ತಾದಿಗಳು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗೋಣ ಎಂದು ಮನವಿ ಮಾಡಿದರು.

ವೀರಶೈವ ಮಹಾಸಭಾ ಅಧ್ಯಕ್ಷ ನಿರಂಜನ್ ಬಾಬು, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಅಮೃತಿ ರಾಜಶೇಖರ್, ಡ್ರೈವರ್ ನಂಜಪ್ಪ, ದಕ್ಷಿಣಮೂರ್ತಿ, ಡಿಂಕಾ ರಾಜಶೇಖರ್, ಕೈಲಾಸ್, ಎಸ್.ಎ.ಮಲ್ಲೇಶ್, ಸುರೇಶ್, ಶಿವಕುಮಾರ್, ಹಾರೋಹಳ್ಳಿ ಧನ್ಯಕುಮಾರ್, ರೈಟರ್ ಸ್ವಾಮೀಗೌಡ, ಸಿ.ಆರ್.ರಮೇಶ್, ಪುರಸಭೆ ಮಾಜಿ ಅಧ್ಯಕ್ಷ ನಂಜೇಗೌಡ, ಚನ್ನೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net