ಹೆಸಕುತ್ತೂರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ

kota me 31 heskathor
Published on

ಕೋಟ: ಎಲ್ಲ ವಿದ್ಯಾರ್ಥಿಗಳು ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಉತ್ಸಾಹದಿಂದ, ಆಸಕ್ತಿಯಿಂದ ಭಾಗವಹಿಸಬೇಕು ಎಂದು ಕೊರ್ಗಿ ಗ್ರಾಮ ಪಂಚಾಯಿತಿ ಸದಸ್ಯ ರಾವೇಂದ್ರ ಶೆಟ್ಟಿ ಕಿವಿಮಾತು ಹೇಳಿದರು.

ಹೆಸಕುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲಾ ಪ್ರಾರಂಭೋತ್ಸವ ಮತ್ತು ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್‌ಡಿಎಂಸಿ ಸದಸ್ಯರು ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಹಾಗೂ ಬಣ್ಣದ ಬಲೂನ್ ನೀಡಿ ಸ್ವಾಗತಿಸಿದರು. ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಸಿದ್ಧಪಡಿಸಿದ್ದ ಸೆಲ್ಫಿ ಕಾರ್ನರ್‌ನಲ್ಲಿ ಪೇಪರ್ ಕಿರೀಟ ಹಾಕಿ ಬಲೂನು ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಮೊದಲ ಶಾಲಾ ದಿನವನ್ನು ಸ್ಮರಣೀಯವಾಗಿಸಿಕೊಂಡರು. ಬಳಿಕ ಸರ್ಕಾರದಿಂದ ಉಚಿತವಾಗಿ ಕೊಡಲಾಗುವ ಪಠ್ಯಪುಸ್ತಕವನ್ನು ವಿತರಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಕೆದ್ಲಾಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಅಶೋಕ ಮೊಗವೀರ, ಎಸ್‌ಡಿಎಂಸಿ ಉಪಾಧ್ಯಕ್ಷೆ ಆಶಾ ಕುಲಾಲ್, ಸದಸ್ಯರಾದ ಸುವಾಸಿನಿ ಶೆಟ್ಟಿ, ಉಷಾ, ರವಿ ಮೊಗವೀರ, ರವಿ ಆಚಾರ್, ರಾಜು ಮೊಗವೀರ, ಜಯಂತಿ, ನೇತ್ರಾವತಿ, ಗೀತಾ, ಸಹ ಶಿಕ್ಷಕರಾದ ಅಶೋಕ್ ತೆಕಟ್ಟೆ, ವಿಜಯ ಶೆಟ್ಟಿ, ಸ್ವಾತಿ ಬಿ., ಗೌರವ ಶಿಕ್ಷಕಿ ಮಧುರ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಶೇಖರ ಕುವಾರ ಸ್ವಾಗತಿಸಿದರು. ಸಹ ಶಿಕ್ಷಕಿ ವಿಜಯ ಆರ್. ವಂದಿಸಿದರು. ಸಹ ಶಿಕ್ಷಕ ರವೀಂದ್ರ ನಾಯಕ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net