

ವಿಜಯವಾಣಿ ಸುದ್ದಿಜಾಲ ಗೋಳಿಯಂಗಡಿ
ಹಿಲಿಯಾಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆರಂಭೋತ್ಸವದ ಪ್ರಯುಕ್ತ ಶಾಲೆಯನ್ನು ಶನಿವಾರ ತಳಿರು ತೋರಣಗಳಿಂದ ಅಲಂಕರಿಸಲಾಯಿತು. ಮಕ್ಕಳನ್ನು ಆರತಿ ಬೆಳಗಿ ಬಲೂನು ಹಾಗೂ ಸಿಹಿತಿಂಡಿ ನೀಡಿ ಸ್ವಾಗತಿಸಲಾಯಿತು.
ಮಕ್ಕಳಿಗೆ ಸರ್ಕಾರ ನೀಡಿದ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಹಳೇ ವಿದ್ಯಾರ್ಥಿ ನೇಪಾಳ ಪಶುಪತಿ ದೇವಳದ ಪ್ರಧಾನ ಅರ್ಚಕ ಗಣೇಶ್ ಭಟ್ ಗೌರವ ಶಿಕ್ಷಕಿಯರಿಬ್ಬರಿಗೆ ನೀಡಿದ ಗೌರವಧನದ ಹಸ್ತಾಂತರ, ಲೇಖನ ಸಾಮಗ್ರಿ, ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಹಾಗೂ ಸದಸ್ಯರು, ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ, ಸಹ ಶಿಕ್ಷಕರು, ಹಳೇ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.