ಆಯುಷ್ಮಾನ್ ವಿಮಾ ಯೋಜನೆಗೆ ಸ್ವಾಗತ

Ayushman
Published on

ಕಾಸರಗೋಡು: ಆದಾಯಮಿತಿಯಿಲ್ಲದೆ ದೇಶದ 70ವರ್ಷ ಮೇಲ್ಪಟ್ಟ ಎಲ್ಲರಿಗೂ ರೂ. 5ಲಕ್ಷ ಆಯುಷ್ಮಾನ್ ವಿಮೆ ಯೋಜನೆ ಜಾರಿಗೊಳಿಸಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ತೀರ್ಮಾನವನ್ನು ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾ ಸಂಘ ಸ್ವಾಗತಿಸಿದೆ.

ದೇಶದ ಎಲ್ಲ ವರ್ಗದ ಜನರಿಗೆ ಪ್ರಯೋಜನ ಸಿಗುವಂತಹ ಈ ಯೋಜನೆ ಭಾರತದ ಇತಿಹಾಸದಲ್ಲಿಯೇ ಪ್ರಥಮ ಎಂದವರು ಶ್ಲಾಘಿಸಿದರು. ಜಿಲ್ಲಾಧ್ಯಕ್ಷ ಎಂ.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ದೇಶೀಯ ಅಧ್ಯಕ್ಷ ಸಿ.ಎಚ್.ಸುರೇಶ್, ಕೋಶಾಧಿಕಾರಿ ಕೆ.ದಯಾನಂದ, ಸದಸ್ಯರಾದ ಬಾಲಚಂದ್ರ, ರವೀಂದ್ರನ್ ನಾಯರ್, ಮಾಧವನ್ ನಾಯರ್, ಚಂದ್ರು, ಸತೀಶ ಮೊದಲಾದವರು ಉಪಸ್ತಿತರಿದ್ದರು.ಜಿಲ್ಲಾ ಕಾರ್ಯದರ್ಶಿ ಸಿ.ಎಚ್.ಜಯೇಂದ್ರ ಸ್ವಾಗತಿಸಿದರು. ಮುರಳೀಧರನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net