ಬಿದ್ದು ಸಿಕ್ಕಿದ ಪರ್ಸ್ ಮರಳಿಸಿದ ಶಿಕ್ಷಕ

Lost-purse
Published on

ಬದಿಯಡ್ಕ: ರಸ್ತೆಯಲ್ಲಿ ಬಿದ್ದುಸಿಕ್ಕಿದ ಹಣತುಂಬಿದ ಪರ್ಸ್‌ನ್ನು ಶಿಕ್ಷಕರೋರ್ವರು ವಾರೀಸುದಾರರಿಗೆ ತಲುಪಿಸಿ ಮಾದರಿಯಾಗಿದ್ದಾರೆ.

ಬದಿಯಡ್ಕ ಪೇಟೆಯಲ್ಲಿ ಗಣೇಶಮೂರ್ತಿ ವಿಸರ್ಜನಾ ಶೋಭಾಯಾತ್ರೆ ಸಂದರ್ಭ ನವಜೀವನ ಪ್ರೌಢಶಾಲೆಯ ಶಿಕ್ಷಕ ರಾಜೇಶ್ ಅಗಲ್ಪಾಡಿ ಅವರಿಗೆ ಜನಜಂಗುಳಿಯ ಮಧ್ಯೆ ಹಣತುಂಬಿದ್ದ ಪರ್ಸ್ ಬಿದ್ದುಸಿಕ್ಕಿತ್ತು. ಕೂಡಲೇ ಸೂಕ್ತ ಮಾಹಿತಿ ಪಡೆದು ವಾರೀಸುದಾರರನ್ನು ಸಂಪರ್ಕಿಸಿದರು.

ಬದಿಯಡ್ಕ ಪೊಲೀಸ್ ಇಲಾಖೆ ಸಮಕ್ಷಮದಲ್ಲಿ ವಾರೀಸುದಾರರಾದ ಬೀಜಂತಡ್ಕ ನಿವಾಸಿ ಸಲಾಂ ಅವರಿಗೆ ಪರ್ಸ್ ಹಸ್ತಾಂತರಿಸಿದರು. 21 ಸಾವಿರ ರೂ. ನಗದು ಹಾಗೂ ಇತರ ದಾಖಲೆ ಪತ್ರಗಳು ಪರ್ಸ್‌ನಲ್ಲಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net