ಹಿರಿಯ ನ್ಯಾಯಾಧೀಶರಿಗೆ ಸ್ವಾಗತ

welcome
ಬೆಳ್ತಂಗಡಿ ನ್ಯಾಯಾಲಯದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು. ವಸಂತ ಮರಕಡ, ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ ಬೆಳ್ತಂಗಡಿ ಸಂದೇಶ್ ಕೆ.ಜೆ., ಹಿರಿಯ ವಕೀಲರ ಸಮಿತಿ ಅಧ್ಯಕ್ಷ ಅಲೋಶಿಯಸ್ ಎಸ್.ಲೋಬೊ ಮತ್ತಿತರರಿದ್ದರು.
Published on

ಬೆಳ್ತಂಗಡಿ: ಬೆಳ್ತಂಗಡಿ ವಕೀಲರ ಸಂಘ ವತಿಯಿಂದ ವಕೀಲರ ಭವನದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಪ್ರಧಾನ ಹಿರಿಯ ನ್ಯಾಯಾಧೀಶ ಶಶಿಧರ ಎಂ.ಗೌಡ ಅವರಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು. ಸವದತ್ತಿ ನ್ಯಾಯಾಲಯದಿಂದ ವರ್ಗಾವಣೆಗೊಂಡು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ.

ವಸಂತ ಮರಕಡ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ ಬೆಳ್ತಂಗಡಿ ಸಂದೇಶ್ ಕೆ.ಜೆ., ಹಿರಿಯ ವಕೀಲರ ಸಮಿತಿ ಅಧ್ಯಕ್ಷ ಅಲೋಶಿಯಸ್ ಎಸ್.ಲೋಬೊ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ., ಎಜಿಪಿ, ಮನೋಹರ್ ಕುಮಾರ್ ಎಂ., ಎಪಿಪಿಯವರಾದ ದಿವ್ಯಾರಾಜ್ ಹೆಗ್ಡೆ, ಆಶೀತಾ, ವಕೀಲರ ಸಂಘದ ಪದಾಧಿಕಾರಿಗಳು, ವಕೀಲರುಗಳು, ನ್ಯಾಯಾಲಯದ ಸಿಬ್ಬಂದಿ ವರ್ಗ ಮತ್ತು ಮಾಧ್ಯಮ ವರ್ಗದವರು ಉಪಸ್ಥಿತರಿದ್ದರು. ನವೀನ್ ಬಿ.ಕೆ.ಸ್ವಾಗತಿಸಿ, ಸಂದೀಪ್ ಡಿಸೋಜ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net