

ಮಂಗಳೂರು: ಯಕ್ಷಗಾನ ಓದುವ, ಲೋಕದ ವಿಚಾರಗಳನ್ನು ಮನನ ಮಾಡಿಕೊಳ್ಳುವ ವೈಚಾರಿಕ ಶಕ್ತಿ ಉದ್ದೀಪನಗೊಳ್ಳುತ್ತದೆ. ಈ ಮೂಲಕ ಆತ್ಮಸ್ಥೈರ್ಯ ವೃದ್ಧಿಯಾಗುತ್ತದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಕದ್ರಿಯಲ್ಲಿ ನಡೆಯುತ್ತಿರುವ ಸರಯೂ ಸಪ್ತಾಹದ ದ್ವಿತೀಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಕ್ಷಗಾನದಂತಹ ಸಾಗರೋಲ್ಲಂಘನ ಕಲೆಯನ್ನು ನಂಬಿ ಎಷ್ಟೋ ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಝೀ-ಕನ್ನಡ ಸರಿಗಮಪ ಸೀಸನ್-19ರ ಸಂಗೀತ ಕಾರ್ಯಕ್ರಮದಲ್ಲಿ ದ್ವಿತೀಯ ರನ್ನರ್ಸ್ ಅಪ್ ಆಗಿ ಮೂಡಿ ಬಂದ ಶಾರದಾ ವಿದ್ಯಾಲಯದ ವಿದ್ಯಾರ್ಥಿನಿ ತನುಶ್ರೀ ಅವರನ್ನು ಸನ್ಮಾನಿಸಲಾಯಿತು.
ವಕೀಲ ಜಗದೀಶ ಶೇಣವ, ನಿರೂಪಕ ಸುಧಾಕರ ರಾವ್ ಪೇಜಾವರ, ಭಾರತೀ ಪ್ರಮೋದ್, ಪ.ರಾಮಕೃಷ್ಣರಾವ್, ಭಾಲಕೃಷ್ಣ ಶೆಟ್ಟಿ, ನಾಗರಾಜ ಖಾರ್ವಿ ಉಪಸ್ಥಿತರಿದ್ದರು. ಬೆಳಗ್ಗೆಯಿಂದ ಸಾಯಂಕಾಲದವರೆಗೆ ಆಹ್ವಾನಿತ ಮಹಿಳಾ ತಂಡಗಳಿಂದ ಮಹಿಳಾ ಯಕ್ಷಗಾನ ತಾಳಮದ್ದಳೆ ಸಂಭ್ರಮ ನಡೆಯಿತು, ಸಭಾ ಕಾರ್ಯಕ್ರಮದ ಬಳಿಕ ಗುರುದಕ್ಷಿಣಿ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು.