ಆಯುಧ ಪೂಜೆಗೆ ಖರೀದಿ ಜೋರು

1001632163
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಹೊಳೆನರಸೀಪುರ: ಆಯುಧ ಪೂಜೆಯ ಪ್ರಯುಕ್ತ ಪಟ್ಟಣದ ಮಾರುಕಟ್ಟೆಯಲ್ಲಿ

ಮಂಗಳವಾರ ಸಂಜೆ ಜನಜಂಗುಳಿ ಕಂಡುಬಂತು. ಸಾರ್ವಜನಿಕರು ತಮ್ಮ ತಮ್ಮ ವಾಹನಗಳನ್ನು, ಅಂಗಡಿಗಳನ್ನು ಪೂಜೆ ಮಾಡುವ ಕಾರಣ ಹೂವು, ಹಣ್ಣು, ಕುಂಬಳಕಾಯಿ ಮತ್ತು ಪೂಜೆಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದಿದ್ದರು. ಮಾರಾಟಗಾರರು ಹೇಳಿದ್ದೇ ಬೆಲೆ ಎಂಬಂತಾಗಿತ್ತು. ಇದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿತಾಗಿತ್ತು. ಬೂದುಗುಂಬಳ ಒಂದು ಕೆಜಿಗೆ 40 ರೂ, ಬಾಳೆಹಣ್ಣು 80 , ತೆಂಗಿನಕಾಯಿ ಒಂದಕ್ಕೆ 50 ರಿಂದ 90 ರೂ., ಸೇವಂತಿಕೆ ಹೂವು 60 ರಿಂದ 80 ರೂ. (ಒಂದು ಮಾರಿಗೆ) ಬೆಲೆ ಇತ್ತು. ತೆಂಗಿನಕಾಯಿ ಬೆಲೆ ಗಗನ ಮುಟ್ಟಿರುವ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಷ್ಟೇ ಬೆಲೆಯಾದರು ಪೂಜಾ ಸಾಮಗ್ರಿಗಳನ್ನು ಕೊಳ್ಳಲೇ ಬೇಕಾಗಿರುವುದು ಅನಿವಾರ‌್ಯವಾಗಿತ್ತು. ಆಯುಧ ಪೂಜೆಯ ಸಂದರ್ಭದಲ್ಲಿ ಪಿತೃಪಕ್ಷವನ್ನೂ ಮಾಡುವ ಸಂಪ್ರದಾಯ ತಾಲೂಕಿನ ಹಲವು ಗ್ರಾಮಗಳಲ್ಲಿ ಇರುವ ಕಾರಣ ಖರೀದಿ ಭರಾಟೆ ಜೋರಾಗಿಯೇ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net