ದೌರ್ಬಲ್ಯ ಮೆಟ್ಟಿನಿಲ್ಲುವುದೇ ಸಾಧನೆ

1SND-01
ಸಿಂಧನೂರು ಬಿಸಿಎಂ ಹಾಸ್ಟೆಲ್‌ನ 44ನೇ ವಾರ್ಷಿಕೋತ್ಸವ ಸಮಾರಂಭವನ್ನು ಎಸ್.ಡಿ.ಆರ್.ಎಫ್ ಡೆಪ್ಯೂಟಿ ಕಮಾಂಡೆಂಟ್ ಎಸ್ ಗುರುನಾಥ ಉದ್ಘಾಟಿಸಿದರು. ಬಿಸಿಎಂ ಇಲಾಖೆ ತಾಲೂಕ ಕಲ್ಯಾಣಾಧಿಕಾರಿ ಲಿಂಗಪ್ಪ ಅಂಗಡಿ, ಉಪನ್ಯಾಸಕರಾದ ಡಾ.ಹುಸೇನಪ್ಪ ಅಮರಾಪುರ, ದಾವಲಸಾಬ ಇದ್ದರು.
Published on

ಸಿಂಧನೂರು: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದೌರ್ಬಲ್ಯಗಳನ್ನು ಅರಿತು, ಅವುಗಳಿಂದ ವಿಮುಕ್ತಿ ಹೊಂದಿ ಜ್ಞಾನವಂತನಾಗುವುದೇ ನಿಜವಾದ ಸಾಧನೆ ಎಂದು ಕಲಬುರಗಿಯ ಎಸ್.ಡಿ.ಆರ್.ಎಫ್ ಡೆಪ್ಯೂಟಿ ಕಮಾಂಡೆಂಟ್ ಎಸ್.ಗುರುನಾಥ ಹೇಳಿದರು.

ನಗರದ ಉಪ್ಪಾರವಾಡಿಯಲ್ಲಿ ತಾಲೂಕು ಹಿಂದುಳಿದ ವರ್ಗಗಳ ವಸತಿ ನಿಲಯಗಳ ಒಕ್ಕೂಟದಿಂದ ಈಚೆಗೆ ನಡೆದ 44ನೇ ವಾರ್ಷಿಕೋತ್ಸವ ಮತ್ತು ಪದವಿ ಅಂತಿಮ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರಿ ನೌಕರಿ ಜೀವನದ ಒಂದು ಭಾಗವೇ? ಎಂಬ ವಿಷಯ ಮಂಡನೆ ಮಾಡಿದರು, ದುಡಿಮೆಗೆ ಉದ್ಯೋಗ ಮುಖ್ಯ. ಯಾವುದೇ ಉದ್ಯೋಗವಾಗಿದ್ದರೂ ಅದನ್ನೂ ಪ್ರಾಮಾಣಿಕವಾಗಿ ಮಾಡಬೇಕು. ಸರಕಾರಿ ನೌಕರಿ ಎಲ್ಲರೂ ಪಡೆಯಲು ಸಾಧ್ಯವಿಲ್ಲ.

ಸರಕಾರಿ ಕೆಲಸ ಪಡೆಯಲು ನಿರಂತರ ಶ್ರಮ ಮುಖ್ಯ. ಖಾಸಗಿಯಾಗಿ ಕೆಲಸ ಮಾಡುವ ಬಹುತೇಕರು ಲಕ್ಷಗಟ್ಟಲೆ ವೇತನ ಪಡೆಯುತ್ತಿದ್ದಾರೆ. ಕೆಲ ಐಎಎಸ್ ಅಧಿಕಾರಿಗಳು ವೃತ್ತಿ ತೊರೆದು ಅಕಾಡೆಮಿ ಮಾಡಿದ್ದಾರೆ. ಹೀಗಾಗಿ ಯುವ ಸಮೂಹವು ಉನ್ನತ ಉದ್ದೇಶದೊಂದಿಗೆ ಮುನ್ನಡೆಯಬೇಕು ಎಂದರು.

ಶಿಕ್ಷಕ ಶರಣಬಸವ ದಂಡಿನ್ ಮಾತನಾಡಿ, ಸರ್ಕಾರಿ ಕೆಲಸವೆಂದರೆ ಆರ್ಥಿಕ ಭದ್ರತೆ ಸಿಗುತ್ತದೆ ಎಂಬ ಭಾವನೆ ಎಲ್ಲರಲ್ಲೂ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರಕಾರ 7 ಲಕ್ಷ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದಾಗ 22 ಕೋಟಿ ನಿರುದ್ಯೋಗಿಗಳು ಅರ್ಜಿ ಹಾಕಿದ್ದರು. ಎಲ್ಲರೂ ಭರವಸೆಯೊಂದಿಗೆ ಮುನ್ನಡೆಯಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net