

ಕೊಳ್ಳೇಗಾಲ: ಪಟ್ಟಣದ ಮಹದೇಶ್ವರ ಕಾಲೇಜು ಮೈದಾನದಲ್ಲಿ ಶನಿವಾರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಎಂ.ಜಿ.ಎಸ್.ವಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಕಾರ್ನರ್ ಸ್ಟೋನ್ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ವಿಜೇತರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಬಾಲಕಿಯರ ಬ್ಯಾಸ್ಕೆಟ್ ಬಾಲ್ನಲ್ಲಿ ಪ್ರಥಮ ಸ್ಥಾನ, ಬಾಲಕಿಯರ 4*400 ಮೀಟರ್ ರಿಲೇಯಲ್ಲಿ ಪ್ರಥಮ, ಭರ್ಜಿ ಎಸೆತದಲ್ಲಿ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಪ್ರಥಮ, 1,500 ಮೀ. ಓಟದಲ್ಲಿ ಮೇಘಾ ಪ್ರಥಮ, ಸಂಜು ತೃತೀಯ ಸ್ಥಾನ, 800 ಮೀ. ಓಟದಲ್ಲಿ ಸ್ಟೀಫನ್ ಸ್ಟಾಲಿಯೋ ದ್ವಿತೀಯ, 200 ಮೀ. ಓಟದಲ್ಲಿ ಅನೀಶ್ ತೃತೀಯ, 100 ಮೀ. ಓಟದಲ್ಲಿ ವಿದ್ಯಾಶ್ರೀ ತೃತೀಯ, 3000 ಮೀ. ಓಟದ ಸ್ಪರ್ಧೆಯಲ್ಲಿ ಯಶ್ವಂತ್ ತೃತೀಯ, ಎತ್ತರ ಜಿಗಿತದಲ್ಲಿ ಸ್ಟೀಫನ್ ಸ್ಟಾಲಿಯೋ ತೃತೀಯ ಸ್ಥಾನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿವಿಧ ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಕ್ರೀಡಾ ತರಬೇತಿದಾರ ಪ್ರಶಾಂತ್ ಅವರನ್ನು ಕಾಲೇಜಿನ ಚೇರ್ಮನ್ ಎನ್.ಮಹೇಶ್, ಅಧ್ಯಕ್ಷ ರೂಬನ್ ಮೊಸೆಸ್, ಪ್ರಾಂಶುಪಾಲ ರೋಷನ್ ಪ್ರಿನ್ಸ್, ಪವನ್, ಮಲ್ಲೇಶ್ ಅಭಿನಂದಿಸಿದ್ದಾರೆ.