

ಕೊಳ್ಳೇಗಾಲ: ಸಮೃದ್ಧ ಸುಸಂಸ್ಕೃತ, ಆದರ್ಶ ಸಮಾಜವನ್ನು ನಾವು ಕಟ್ಟಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷರಾದ ಬಳಿಕ ಜಿಲ್ಲಾ ಪ್ರವಾಸ ಕೈಗೊಂಡಿರುವ ಶಂಕರ್ ಬಿದರಿ ಅವರು, ಪಟ್ಟಣದ ಶ್ರೀ ಗುರುಮಲ್ಲೇಶ್ವರ ಕಾಂಪ್ಲ್ಲೆಕ್ಸ್‌ನಲ್ಲಿ ಸಮಾಜದ ಪ್ರಮುಖರ ಉದ್ದೇಶಿಸಿ ಮಾತನಾಡಿ, ಪ್ರಾಮಾಣಿಕತೆ, ನಿಷ್ಠೆ, ಸೇವಾ ಮನೋಭಾವನೆಯಿಂದ ದುಡಿದರೆ ವೀರಶೈವ ಲಿಂಗಾಯತ ಸಮಾಜ ಎತ್ತರಕ್ಕೆ ಬೆಳೆಯುತ್ತದೆ. ಸಮಾಜದ ಪ್ರತಿಯೊಬ್ಬರು ಸಂಘಟಿತರಾಗಬೇಕು ಎಂದರು.
ಸಂಘಟನೆಯಲ್ಲಿ ಮೂಲ ಸೌಕರ್ಯ ಸಮಿತಿ, ನ್ಯಾಯ ಸಮಿತಿ ರಚಿಸಿಕೊಂಡು ಜನಾಂಗದ ಜನರ ಕಷ್ಟ ಕಾರ್ಪಾಣ್ಯಕ್ಕೆ ನೆರವೇರಬೇಕಿದೆ. ಎಲ್ಲಿ ಸಮುದಾಯ ಜನರು ಇರುವರೋ ಅಲ್ಲಿ ಶಾಲೆ, ಸ್ಮಶಾನ ಹಾಗೂ ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವ ಕೆಲಸಗಳಾಗಬೇಕು ಎಂದರು.
ಸಂಘದ ಸದಸ್ಯತ್ವ ಹೆಚ್ಚಾಗಬೇಕು. ತಾಲೂಕು ಘಟಕದಲ್ಲಿ 10 ಸಾವಿರ ಸದಸ್ಯತ್ವ ನೋಂದಣಿ ಮಾಡಬೇಕು. 10 ಕೋಟಿ ಮೂಲಧನ ಕ್ರೋಢಿಕರಣ ಮಾಡಬೇಕು. ನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯ ಮೂಡಿದರು ಸರಿಪಡಿಸಿಕೊಂಡು ಸಮಾಜದ ಏಳಿಗೆಗೆ ದುಡಿಯಬೇಕು ಎಂದರು.
ಅಖಿಲ ಭಾರತ ವೀರಶೈವ ಮಹಸಭಾ ಜಿಲ್ಲಾಧ್ಯಕ್ಷ ನಂದೀಶ್, ತಾಲೂಕು ಅಧ್ಯಕ್ಷ ಪುಟ್ಟಣ್ಣ, ಎನ್.ರಿಚ್. ಮಹದೇವಸ್ವಾಮಿ, ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಮಲ್ಲೇಶಪ್ಪ, ಕೆಎಂಎಫ್ ನಿರ್ದೇಶಕ ನಂಜುಂಡಸ್ವಾಮಿ ಮಧುವನಹಳ್ಳಿ, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಮಹಿಳಾ ಘಟಕ ರಾಜ್ಯಧ್ಯಕ್ಷೆ ರೂಪಾ ಇತರರು ಇದ್ದರು.