ಸಂವಿಧಾನ ರಕ್ಷಣೆಗೆ ಒಗ್ಗೂಡಬೇಕು

11 feb tnp 01
ತಿ.ನರಸೀಪುರ ಪಟ್ಟಣದಲ್ಲಿ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಆಯ್ಕೆಗೊಂಡ ನೂತನ ಅಧ್ಯಕ್ಷರನ್ನ ರಾಷ್ಟ್ರೀಯ ಅಹಿಂದ ಒಕ್ಕೂಟ ಹಾಗೂ ಸುನೀಲ್ ಬೋಸ್ ಯುವ ಬ್ರಿಗೇಡ್ ವತಿಯಿಂದ ಸನ್ಮಾನಿಸಲಾಯಿತು. ಎಂ.ರಮೇಶ್, ಕುಮಾರ್ ರಾಮೇಗೌಡ, ಸುಂದರ ನಾಯಕ, ಸೋಸಲೆ ದೇವರಾಜ್, ಸೋಮುದಾದ, ಬೀರೇಶ್ ಕೆಬ್ಬೆಹುಂಡಿ, ಸೋಸಲೆ ರಾಜು, ಕೆ.ಅಶ್ವಿನ್ ಕುಮಾರ್ ಇತರರು ಇದ್ದರು.
Published on

ತಿ.ನರಸೀಪುರ: ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದ ಸಮುದಾಯಗಳ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಯುವ ಜನರನ್ನು ಒಗ್ಗೂಡಿಸಿ, ನಾಯಕತ್ವದ ಗುಣಗಳನ್ನ ರೂಪಿಸಿಕೊಳ್ಳಲು ವೇದಿಕೆ ಕಲ್ಪಿಸುವುದೇ ರಾಷ್ಟ್ರೀಯ ಅಹಿಂದ ಒಕ್ಕೂಟದ ಧ್ಯೇಯೋದ್ದೇಶವಾಗಿದೆ ಎಂದು ಸುನೀಲ್ ಬೋಸ್ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಕುಮಾರ್ ರಾಮೇಗೌಡ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸಂಜೆ ರಾಷ್ಟ್ರೀಯ ಅಹಿಂದ ಒಕ್ಕೂಟ ಹಾಗೂ ಸುನೀಲ್ ಬೋಸ್ ಯುವ ಬ್ರಿಗೇಡ್ ತಂಡ ಆಯೋಜಿಸಿದ್ದ ಕ್ಯಾಲೆಂಡರ್ ಬಿಡುಗಡೆ ಹಾಗೂ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಅಧ್ಯಕ್ಷರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹಲವು ಶತಮಾನಗಳಿಂದ ಶೋಷಣೆಗೆ ಒಳಗಾದ ದಲಿತ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಜನರು ರಾಜಕೀಯವಾಗಿ ಜಾಗೃತರಾಗಿ ಪ್ರಜಾಪ್ರಭುತ್ವದ ಉಳಿವಿಗೆ ಹಾಗೂ ಸಂವಿಧಾನ ರಕ್ಷಣೆಗೆ ಒಗ್ಗೂಡಬೇಕು ಎಂದು ಕರೆ ನೀಡಿದರು.

ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಅವರ ನಂತರ ಮೈಸೂರು ಮತ್ತು ಚಾಮರಾಜನಗರ ಭಾಗದಲ್ಲಿ ಅಹಿಂದ ನಾಯಕತ್ವವನ್ನು ಸಂಸದ ಸುನೀಲ್ ಬೋಸ್ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ವಹಿಸಬೇಕಿದ್ದು, ಇಬ್ಬರ ನಾಯಕತ್ವವನ್ನು ಬಲಪಡಿಸುವ ಕೆಲಸವನ್ನು ನಾವೆಲ್ಲರೂ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಚುನಾವಣೆಯ ಮೂಲಕ ಯುವ ಕಾಂಗ್ರೆಸ್ ಘಟಕಕ್ಕೆ ಆಯ್ಕೆಯಾಗಿರುವ ನರಸೀಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ನವಾಜ್ ಖಾನ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನಿಲಸೋಗೆ ಪ್ರದೀಪ್ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷೆ ಸವಿತಾ ಅವರ ಪತಿ ಗೋಪಾಲರಾಜ್ ಅವರನ್ನು ಸನ್ಮಾಸಲಾಯಿತು.

ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ರಮೇಶ್, ಕೆಪಿಸಿಸಿ ಸದಸ್ಯ, ರಾಷ್ಟ್ರೀಯ ಅಹಿಂದ ಒಕ್ಕೂಟದ ಗೌರವಾಧ್ಯಕ್ಷ ಸುಂದರ ನಾಯಕ, ತಾಲೂಕು ಅಧ್ಯಕ್ಷ ಸೋಸಲೆ ದೇವರಾಜ್, ಪ್ರಧಾನ ಕಾರ್ಯದರ್ಶಿ ಹೋಟೆಲ್ ಸೋಮುದಾದ, ಜಿಲ್ಲಾ ಉಪಾಧ್ಯಕ್ಷ ಬೀರೇಶ್ ಕೆಬ್ಬೆಹುಂಡಿ, ಕಾರ್ಯದರ್ಶಿ ಸೋಸಲೆ ರಾಜು, ಕಾರ್ಯಧ್ಯಕ್ಷ ಕೆ.ಅಶ್ವಿನ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಬೆನಕನಹಳ್ಳಿ ಅರುಣ್‌ಕುಮಾರ್, ಸಹ ಕಾರ್ಯದರ್ಶಿ ಶಬ್ಬೀಲ್ ಖಾನ್, ಪ್ರಚಾರ ಸಮಿತಿ ಅಧ್ಯಕ್ಷ ಗರ್ಗೆಶ್ವರಿ ಗೋಪಾಲ್ ರಾಜ್, ತಾಲೂಕು ಯುವ ಘಟಕದ ಅಧ್ಯಕ್ಷ ತಲಕಾಡು ಭರತ್, ಸೋಸಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್(ಲೋಕ), ಮುಖಂಡರಾದ ಅಸ್ಲಾಂ ಪಾಷ, ಮನ್ನೇಹುಂಡಿ ಮಹೇಶ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net