ನಾವೆಲ್ಲರೂ ಸನ್ಮಾರ್ಗದತ್ತ ಸಾಗಬೇಕು

13TLR1
Published on

ತಲ್ಲೂರ: ದೇವಾಲಯಗಳಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.

ಸಮೀಪದ ಸೋಮಾಪುರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಜೀವಿಸುವ ನಾವು ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದತ್ತ ಸಾಗಬೇಕು ಎಂದರು.

ಮುಖಂಡ ಪ್ರಕಾಶ ಮುರಗೊಡ ಮಾತನಾಡಿ, ಹಸಿದ ಹೊಟ್ಟೆಗೆ ಅನ್ನ ನೀಡುವ ರೆತರೇ ನಿಜವಾದ ದೇವರಾಗಿದ್ದು, ಅವರನ್ನು ಗೌರವದಿಂದ ಕಂಡರೆ ನಾಡು ಸಮದ್ಧಿಯಾಗಲು ಸಾಧ್ಯ ಎಂದರು.

ಮುಖಂಡ ಉಮೇಶ ಹಮ್ಮಿಣಿ, ಪ್ರಭು ಪ್ರಭುನವರ, ಸಹದೇವ ನಾಯ್ಕರ, ಕೀರಪ್ಪ ಗೋಟಿ, ಮಾರುತಿ ನಾಯ್ಕರ, ಭೀಮಪ್ಪ ಗೋಟಿ, ಪ್ರಕಾಶ ಬಸಿಡೋಣಿ, ಹನಮಂತ ಗೋಟಿ, ಪ್ರಕಾಶ ನಾಯ್ಕರ, ಕೀರಪ್ಪ ಹಮ್ಮಿಣಿ, ರಾಜು ಭಂಡಾರಿ, ಭೀಮಪ್ಪ ಚಂದ್ರನ್ನವರ, ಹನಮಂತ ಬೆಡಸುರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net