

ಕಾಸರಗೋಡು: ವಯನಾಡ್ ದುರಂತ ಸಂತ್ರಸ್ತರಿಗೆ ಸಾಂತ್ವನ ಒದಗಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಆಹಾರ, ಬಟ್ಟೆ ಹಾಗೂ ಇತರ ಸಾಮಗ್ರಿ ಹೊತ್ತ ಮೊದಲ ವಾಹನವನ್ನು ವಯನಾಡಿಗೆ ಕಳುಹಿಸಲಾಯಿತು.
ಜಿಲ್ಲಾಧಿಕಾರಿ ಸಭಾಂಗಣದ ಎದುರು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ವಾಹನ ಬೀಳ್ಕೊಟ್ಟರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಜ್ ಪಾದೂರು, ವಸ್ತು ಸಂಗ್ರಹಣಾ ಕೇಂದ್ರದ ಪ್ರಭಾರಿ ಪಿ.ಸುರ್‌ಜಿತ್, ಜಿಲ್ಲಾ ಉದ್ಯೋಗಾಧಿಕಾರಿ ಅಜಿತ್ ಜಾನ್, ಹುಸೂರು ಶಿರಸ್ತೇದಾರ್ ಆರ್.ರಾಜೇಶ್, ಪ್ರಭಾಕರನ್ ಭಾಗವಹಿಸಿದ್ದರು.