ಉಜಿರೆಯಲ್ಲಿ ನದಿಯಂತಾದ ಹೆದ್ದಾರಿ

river 1
ಬೆಳ್ತಂಗಡಿ ಬಿಷಪ್ ಹೌಸ್ ಬಳಿ ತೋಟ ಜಲಾವೃತವಾಗಿದೆ.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಉಜಿರೆ ಕೆಳಗಿನ ಪೇಟೆಯಲ್ಲಿ ಹೆದ್ದಾರಿಯುದ್ದಕ್ಕೂ ನೀರು ಹರಿದು ನದಿಯಂತಾಯಿತು. ದಿನವಿಡೀ ವಾಹನ ಸವಾರರು ಭಾರಿ ಸಮಸ್ಯೆ ಎದುರಿಸಿದರು. ಇಲ್ಲಿನ ಕೆಲವು ಅಂಗಡಿಗಳಿಗೂ ನೀರು ನುಗ್ಗಿ ತ್ಯಾಜ್ಯ ಸಂಗ್ರಹಗೊಂಡಿತು.

ಮೇಲಂತಬೆಟ್ಟು ಗ್ರಾಮದ ಶ್ರೀ ನಾಗಬ್ರಹ್ಮ ದೇವಸ್ಥಾನದ ಗರ್ಭಗುಡಿಯೊಳಗೆ ನೀರು ನುಗ್ಗಿದ್ದು, ದೇವಸ್ಥಾನದ ಕಾಂಪೌಂಡ್ ಕುಸಿದಿದೆ. ದೇವಸ್ಥಾನದ ಸಮೀಪ ಬರೆ ಕುಸಿತಕೊಳಗಾಗಿದೆ. ಮೇಲಂತಬೆಟ್ಟು ಗ್ರಾಮದಲ್ಲಿ ಆನೇಕ ಕಡೆಗಳಲ್ಲಿ ಗುಡ್ಡ ಕುಸಿತ, ಮನೆ ಹಾನಿ ಸಂಭವಿಸಿದೆ.

ಬಾರ್ಯ ಗ್ರಾಪಂ ವ್ಯಾಪ್ತಿಯ ಕಜೆಮಾರು ಭಾಗದ ಬಷೀರ್ ಎಂಬುವರ ಮನೆ ಪಕ್ಕದ ಭೂಮಿ ಕುಸಿಯುವ ಹಂತದಲ್ಲಿದ್ದು ಇಲ್ಲಿನ ನೆರೆ ಮನೆಯವರಾದ ಸಿದ್ದಿಕ್ ಕಜೇಮಾರ್ ಗಿರಿಜಾಎಂಬುವರ ಮನೆಗಳಿಗೆ ಅಪಾಯವಿದ್ದು, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಗ್ರಾಪಂ ಸದಸ್ಯ ಫೈಝಲ್ ತಿಳಿಸಿದ್ದಾರೆ.

ವೇಣೂರು ಗ್ರಾಪಂ ಕಚೇರಿ ಕಟ್ಟಡಗಳು ಅಪಾಯದಂಚಿನಲ್ಲಿವೆ. ಗ್ರಾಪಂ ಹಳೆಯ ಮತ್ತು ಹೊಸ ಕಟ್ಟಡದ ನೆಲದಡಿ ಕುಸಿಯಲಾರಂಭಿಸಿದ್ದು ಗುಡ್ಡದ ಮಣ್ಣು ರಸ್ತೆಯನ್ನು ಆವರಿಸುತ್ತಿದೆ.

ಪಡಂಗಡಿ ಗ್ರಾಮದ ಕುದ್ರೆಂಜ ಎಂಬಲ್ಲಿ ಮಳೆಗೆ ತೋಟಕ್ಕೆ ನೀರು ನುಗ್ಗಿರುವುದು
ಪಡಂಗಡಿ ಗ್ರಾಮದ ಕುದ್ರೆಂಜ ಎಂಬಲ್ಲಿ ಮಳೆಗೆ ತೋಟಕ್ಕೆ ನೀರು ನುಗ್ಗಿರುವುದು
ಅಪಾಯದಂಚಿನಲ್ಲಿರುವ ವೇಣೂರು ಗ್ರಾ.ಪಂ ಕಚೇರಿ ಕಟ್ಟಡಗಳು
ಅಪಾಯದಂಚಿನಲ್ಲಿರುವ ವೇಣೂರು ಗ್ರಾ.ಪಂ ಕಚೇರಿ ಕಟ್ಟಡಗಳು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net