

ಮುಡಾ ಕೇಸ್‌ನಲ್ಲಿ CM ತಪ್ಪು ಮಾಡಿಲ್ಲ ಅಂದರೆ ಸಾಬೀತುಪಡಿಸಲಿ \ ಸತ್ಯ ಮುಚ್ಚಿ ಹಾಕಲು ಕಾಂಗ್ರೆಸ್‌ನವರು ರಾಜ ಭವನ ಚಲೋ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣ ಕುರಿತು ನಾವ್ಯಾರು ಹೋಗಿ ಸಿಎಂ ಸಿದ್ದರಾಮಯ್ಯ ಅವರನ್ನು ಬಂಧಿಸಿ ಎಂದು ರಾಜಪಾಲರಿಗೆ ಕೇಳಿಲ್ಲ. ತಪ್ಪು ಮಾಡಿಲ್ಲ ಎಂದು ಹೇಳುವ ಅವರು ಯಾಕೆ ಈ ವಿಷಯದಲ್ಲಿ ಭಯಗೊಳ್ಳುತ್ತಿದ್ದಾರೆ. ತಪ್ಪು ಮಾಡಿಲ್ಲದಿದ್ದರೆ ಅದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಿ ಎಂದು ಮಾಜಿ ಮುಖ್ಯಮಂತ್ರಿಗಳಾಗಿರುವ ಸಂಸದ ಜಗದೀಶ ಶೆಟ್ಟರ್ ಸವಾಲು ಹಾಕಿದರು.
ನಗರದಲ್ಲಿ ಶನಿವಾರ ಭೇಟಿಯಾದ ಪತ್ರಕರ್ತರ ಜತೆ ಮಾತನಾಡಿ,ನಾವು ಬೇಡಿಕೆ ಇಟ್ಟಿದ್ದು ತನಿಖೆ ಮಾಡಿ ಎಂದು. ಆದರೆ, ಭಯಗೊಳ್ಳುತ್ತಿರುವುದು, ರಾಜಭವನ ಚಲೋ ಹೋರಾಟ ಮಾಡುತ್ತಿರುವುದು ನೋಡಿದಾಗ ದಾಲ್ ಮೇ ಕುಚ್ ಕಾಲಾ ಹೈ ಎಂದAಗೆ ಅನಿಸುತ್ತಿದೆ ಎಂದರು.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ತಪ್ಪು ಮಾಡಿz್ದÁರೆ ಎಂಬುದು ಸ್ಪಷ್ಟವಾಗಿದೆ.ಒಂದು ಸಲ ನೋಟಿಫಿಕೇಷನ್ ಆಗುತ್ತದೆ, ಇನ್ನೊಂದು ಸಾರಿ ಡಿನೋಟಿಫಿಕೇಷನ್ ಆಗುತ್ತೆ. ಇಲ್ಲಿ ಸಾಕಷ್ಟು ಜನ ರೈತರು ಜಮೀನು ಕೊಡಲು ಮುಂದೆ ಬರಲ್ಲ. ಹೀಗಿರುವಾಗ ೨೦೦೯ರಲ್ಲಿ ರೈತರ ಜಮೀನು ಕೊಟ್ಟಿz್ದÁರೆ. ರೈತರು ಕೊಟ್ಟ ಜಮೀನಿನಲ್ಲಿಯೇ ೫೦:೫೦ ಅನುಪಾತದಲ್ಲಿ ನಿವೇಶನ ಕೊಡುವ ನಿಯಮವಿದೆ. ಆದರೆ, ಸಿದ್ದರಾಮಯ್ಯ ಮೂರು ಎಕರೆ ಜಮೀನು ಪಡೆದಿದ್ದರೆ ನಾವ್ಯಾರು ಕೇಳುತ್ತಿರಲಿಲ್ಲ. ಸಾಕಷ್ಟು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಿದರು.
ಸದನದಲ್ಲಿ ಚರ್ಚೆ ಮಾಡಿ ಅಂದರೆ ಪಲಾಯಾನವಾದ ಮಾಡಿz್ದÁರೆ.ಮಾರನೇ ದಿನ ಸುದ್ದಿಗೋಷ್ಠಿಯಲ್ಲಿ ತಮಗೆ ಬೇಕಾದ ದಾಖಲೆ ಬಿಡುಗಡೆ ಮಾಡಿದ್ದಾರೆ. ತಪ್ಪು ಮಾಡಿಲ್ಲದಿದ್ದರೆ ಸದನದಲ್ಲಿಯೇ ಉತ್ತರ ಕೊಡಬಹುದಿತ್ತಲ್ಲ.ಮರುದಿನ ಸುದ್ದಿಗೋಷ್ಟಿ ನಡೆಸಿ ಅವರಿಗೆ ಬೇಕಾದ ದಾಖಲೆ ಬಿಡುಗಡೆ ಮಾಡಿz್ದÁರೆ ಎಂದು ಹೇಳಿದರು.
ಮುಡಾ ತನಿಖೆ ಮಾಡಿ ಅಂದರೆ, ಅವರ ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾರೆ ಅಂತಾರೆ. ಹಿಂದೆ ಅರ್ಕಾವತಿ ವಿಷಯದಲ್ಲಿಯೂ ತಪ್ಪು ಮಾಡಿಲ್ಲ ಅನ್ನುವ ಸಿದ್ದರಾಮಯ್ಯ ಕೆಂಪಣ್ಣ ವರದಿ ಸದನದಲ್ಲಿ ಮಂಡಿಸಲಿ ಎಂದು ಸವಾಲು ಹಾಕಿದರು. ಸಾರ್ವಜನಿಕವಾಗಿ ಹೇಳಿಕೊಳ್ಳಬೇಕು ಅದನ್ನುö್ನ ಬಿಟ್ಟು ಸಾಚಾ ಅಂತಾ ಹೇಳಿಕೊಳ್ಳುವುದು ಸರಿಯಲ್ಲ ಎಂದರು.
ಮುಡಾ ಹಗರಣಕ್ಕೆ ಪ್ರತಿಯಾಗಿ ಕೋವಿಡ್ ಹಗರಣದ ತನಿಖೆ ಮಾಡುವುದಾಗಿ ಹೇಳುತ್ತಿದ್ದಾರೆ. ಮಾಡಲಿ, ಬೇಡ ಅಂದವರು ಯಾರು ಎಂದು ಪ್ರಶ್ನಿಸಿದರು. ಇದುವರೆಗೂ ಒಂದು ಎಫ್‌ಐಆರ್ ದಾಖಲಿಸಿಲ್ಲ ಎಂದು ಕಿಚಾಯಿಸಿದರು.
ಸತ್ಯ ಮುಚ್ಚಿ ಹಾಕಲು ಕಾಂಗ್ರೆಸ್‌ನವರು ರಾಜ ಭವನ ಚಲೋ ಮಾಡುತ್ತಿz್ದÁರೆ. ಮುಡಾ ಪ್ರಾಸಿಕ್ಯೂಷನ್ ವಿಚಾರ ನ್ಯಾಯಾಲಯದಲ್ಲಿದೆ, ಇನ್ನೂ ವಾದ ಮಂಡಿಸುವುದು ಬಾಕಿ ಉಳಿದಿದೆ, ಅಲ್ಲಿ ತೀರ್ಪು ಏನು ಬರುತ್ತದೆ ಕಾದು ನೋಡೋಣ. ತೀರ್ಪು ಬರುವ ಮೊದಲೇ ರಾಜಭವನ ಚಲೋ ಯಾಕೆ ಎಂದು ಕಾಂಗ್ರೆಸ್‌ಗೆ ಪ್ರಶ್ನಿಸಿದರು. ಮಾಜಿ ಸಿಎಂ ಸಿಡಿ ವಿಚಾರ ಗೊತ್ತಿಲ್ಲ. ನೀವು ರಾಂಗ್ ಪರ್ಸನ್‌ಗೆ ಹೇಳುತ್ತಿದ್ದಿರಿ ಎಂದರು. ರಾಜ್ಯದಲ್ಲಿ ಅರಾಜಕತೆ ಉಂಟಾಗಿರುವುದಕ್ಕೆ ನಟ ದರ್ಶನ ಕೇಸ್ ಉದಾಹರಣೆಯಾಗಿದೆ. ಪರಪ್ಪನ ಅಗ್ರಹಾರದಲ್ಲಿ ಎಲ್ಲ ಸಿಗುತ್ತೆ ಅಂದರೆ,ಉಳಿದ ಜೈಲಿನಲ್ಲಿ ಸಹ ಎಲ್ಲ ತೆರನಾದ ವ್ಯವಸ್ಥೆ ಇರುತ್ತದೆ ಎಂದರ್ಥ ಎಂದರು.