ಆನೆ ದಾಳಿ ವಾಟರ್ ಮನ್ ಗೆ ಗಾಯ

IMG-20240125-WA0088
Published on

ಬಿಡದಿ(ರಾಮನಗರ)

ಆನೆ ದಾಳಿಯಿಂದ ವಾಟರ್ ಮನ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಡದಿಯ ಕೆಂಪನಹಳ್ಳಿ ಬಳಿ ಗುರುವಾರ ನಡೆದಿದೆ.

ತಿಮ್ಮಣ್ಣ( 55) ಆನೆ ದಾಳಿಯಿಂದ ಗಾಯಗೊಂಡ ವ್ಯಕ್ತಿಯಾಗಿದ್ದು ಈತ ಗ್ರಾಮ ಪಂಚಾಯತಿಯಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ.  ಎಂದಿನಂತೆ ಬೆಳಿಗ್ಗೆ ಗ್ರಾಮಕ್ಕೆ ನೀರು ಬಿಡುವ ಸಲುವಾಗಿ ಮೋಟರ್ ಆನ್ ಮಾಡಲು ತೆರಳಿದ್ದ ವೇಳೆ ಎರಡು ಆನೆಗಳು ಅಟ್ಟಾಡಿಸಿಕೊಂಡು ಬಂದಿವೆ.
ಆನೆಗಳನ್ನ ಕಂಡು ಓಡುತ್ತಿದ್ದ ತಿಮ್ಮಣ್ಣ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆನೆ ತಿಮ್ಮಣ್ಣನ ಕಾಲಿನ ಮೇಲೆ ಪಾದ ಇಟ್ಟ ಪರಿಣಾಮ ಕಾಲು ಮುರಿತಕ್ಕೆ ಒಳಗಾಗಿದೆ‌. ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ. ಗಾಯಗೊಂಡ ವ್ಯಕ್ತಿ ಬಿಡದಿಯ ಭರತ್ ಕೆಂಪಣ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನ ಕಾಡಿಗಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net