ವರ್ಷ ಕಳೆದರೂ ದುರಸ್ತಿಯಾಗದ ನೀರಿನ ಘಟಕ

4GTL1
Published on

ಗುತ್ತಲ: ದಲಿತ ಕೇರಿಯಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸ್ಥಾಪನೆ ಮಾಡಿದ್ದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ವರ್ಷವೇ ಗತಿಸಿದರೂ ಸ್ಥಳೀಯ ಗ್ರಾ.ಪಂ. ಆಡಳಿತ ಅದನ್ನು ದುರಸ್ತಿ ಮಾಡುವ ಗೋಜಿಗೆ ಹೋಗದಿರುವುದು ವಿಪರ್ಯಾಸವಾಗಿದೆ.

ಕಳೆದ ಒಂದೂವರೆ ವರ್ಷದಿಂದ ಹಾವನೂರ ಗ್ರಾಮದ ಅಂಬೇಡ್ಕರ್ ನಗದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ಈ ಬಗ್ಗೆ ಅಲ್ಲಿನ ನಿವಾಸಿಗಳು ಸ್ಥಳೀಯ ಗ್ರಾಪಂ ನ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಇದರಿಂದ ದಲಿತ ಕೇರಿಯಲ್ಲಿನ ಜನರಿಗೆ ಕುಡಿಯಲು ಬೋರ್​ವೆಲ್ ನೀರು ಇಲ್ಲವೇ ತುಂಗಭದ್ರಾ ನದಿಯ ನೀರೇ ಗತಿಯಾಗಿದೆ.

ಅನೇಕ ತಿಂಗಳಿನಿಂದ ಅಂಬೇಡ್ಕರ ನಗರದಲ್ಲಿನ ಶುದ್ಧಕುಡಿಯವ ನೀರಿನ ಘಟಕ ಸ್ಥಗಿತಗೊಂಡಿದೆ. ಈ ಬಗ್ಗೆ ಗ್ರಾ.ಪಂ ನವರ ಗಮನಕ್ಕೆ ತಂದರೂ ಸಹ ದುರಸ್ತಿ ಮಾಡಿಸಿಲ್ಲ. ನಮ್ಮ ಓಣಿಯಲ್ಲದೆ ಅಕ್ಕ ಪಕ್ಕದ ಓಣಿಯ ಜನರಿಗೆ ಈ ಘಟಕದಿಂದ ನೀರು ಸಿಗುತ್ತಿತ್ತು. ಆದಷ್ಟು ಬೇಗ ಅಧಿಕಾರಿಗಳು ಘಟಕ ದುರಸ್ತಿ ಪಡಿಸಬೇಕು.| ಮೋಹನ ಎನ್. ನೀರಲಗಿ, ಅಂಬೇಡ್ಕರ ನಗರ ನಿವಾಸಿ, ಹಾವನೂರಅಂಬೇಡ್ಕರ್ ನಗರದಲ್ಲಿನ ಶುದ್ಧ ಕುಡಿಯುವ ನೀರಿ ಘಟಕದ ದುರಸ್ತಿ ಕುರಿತು ಮೇಲಾಧಿಕಾರಿಗಳಿಗೆ ಈಗಾಗಲೇ ವರದಿ ನೀಡಲಾಗಿದೆ. | ಸುನಿತಾ ಗರಡಿ, ಪಿಡಿಓ, ಗ್ರಾ.ಪಂ ಹಾವನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net