ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿ

Published on

ಹೊಳೆನರಸೀಪುರ: ತಾಲೂಕಿನಾದ್ಯಂತ ಪುನರ್ವಸು ಮಳೆ ಭರ್ಜರಿ ಪ್ರಾರಂಭವನ್ನೇ ಪಡೆದುಕೊಂಡಿದ್ದು, ಹೇಮಾವತಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ.

ಹೇಮಾವತಿ ಬಲದಂಡನಾಲೆ, ಎಡದಂಡೆ ನಾಲೆ, ಗುಡ್ಡೇನಹಳ್ಳಿ ಏತ ನೀರಾವರಿ, ಹುಚ್ಚನ ಕೊಪ್ಪಲು ಏತ ನೀರಾವರಿ, ರಂಗೇನಹಳ್ಳಿ ಏತ ನೀರಾವರಿ ಘಟಕಗಳಿಂದ ಈ ತಿಂಗಳೇ ಕಾಲುವೆಗಳಲ್ಲಿ ನೀರು ಹರಿಸಿದರೆ ಕೆರೆಕಟ್ಟೆಗಳು ಭರ್ತಿಯಾಗಿ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿಯಾಗಲಿದೆ ಎಂಬುದು ರೈತರ ಆಶಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net