ಹೆದ್ದಾರಿಯಲ್ಲಿ ಸೃಷ್ಟಿಯಾಯಿತು ಕಾವೇರಿ ಕಾರಂಜಿ; ನದಿಯಂತಾದ ಬೆಂಗಳೂರು-ಮೈಸೂರು ರಸ್ತೆ..

Untitled-1
Published on

ಮಂಡ್ಯ: ಹೆದ್ದಾರಿಯಲ್ಲಿ ಸೃಷ್ಟಿಯಾದ ಕಾರಂಜಿಯಿಂದಾಗಿ ರಸ್ತೆಯೂ ನದಿಯಂತಾಗಿ ಅಪಾರ ಪ್ರಮಾಣದ ಕುಡಿಯುವ ನೀರು ಪೋಲಾದ ಪ್ರಕರಣವೊಂದು ವರದಿಯಾಗಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಲೋಕಪಾವನಿ ನದಿ ಸೇತುವೆ ಬಳಿ ಈ ಕಾರಂಜಿ ಉಂಟಾಗಿದೆ. ಕಾವೇರಿ ನದಿಯಿಂದ ಮಂಡ್ಯಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್​ನಲ್ಲಿ ಒಡಕು ಕಾಣಿಸಿಕೊಂಡಿದ್ದರಿಂದ ಅದರೊಳಗಿಂದ ನೀರು ಕಾರಂಜಿಯಂತೆ ಚಿಮ್ಮಿ ಹರಿದಿದೆ.

ನೀರಿನ ಒತ್ತಡಕ್ಕೆ ಅದು ಕೊಳವೆಯಿಂದ ಮೇಲಕ್ಕೆ ಕಾರಂಜಿಯಂತೆಯೇ ಚಿಮ್ಮಿದ್ದು, ಸುಮಾರು 30 ನಿಮಿಷಗಳ ಕಾಲ ನೀರು ಪೋಲಾಗಿದೆ. ಉಕ್ಕಿ ಹರಿದ ನೀರೆಲ್ಲ ರಸ್ತೆಯಲ್ಲಿ ನದಿಯಂತೆ ಹರಿದುಹೋಗಿದೆ. ಪರಿಣಾಮವಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಕೆಲಕಾಲ ಅಡಚಣೆ ಎದುರಿಸುವಂತಾಗಿತ್ತು. ಜಲಮಂಡಳಿ ಸಿಬ್ಬಂದಿ ಪೈಪ್ ಸರಿಪಡಿಸಿ ನೀರು ಪೋಲಾಗುವುದನ್ನು ನಿಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net