

ವಿಶೇಷ ವರದಿ
ತುಮಕೂರು: ಮಳೆಗಾಲದಲ್ಲೇ ಸ್ಮಾರ್ಟ್ಸಿಟಿಯಲ್ಲಿ ಕಳೆದ 8-0 ದಿನಗಳಿಂದ ಕುಡಿಯುವ ನೀರಿಗಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ನಗರಕ್ಕೆ ನೀರು ಸರಬರಾಜು ಮಾಡುವ ಬುಗುಡನಹಳ್ಳಿ ಜಲಸಂಗ್ರಹಗಾರದ ಪಂಪ್ಹೌಸ್ನ ಬೃಹತ್ ಮೋಟಾರ್ಗಳು ಕೆಟ್ಟುಹೋಗಿದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಈ ವೇಳೆ ಪರ್ಯಾಯ ಮಾರ್ಗ ಕಂಡುಕೊಳ್ಳದ ಮಹಾನಗರ ಪಾಲಿಕೆ ನೀರಿನ ಅಭಾವ ಸೃಷ್ಟಿಗೆ ಕಾರಣವಾಗಿತ್ತು.
ನಗರದ ಬಹುತೇಕ ವಾರ್ಡ್ಗಳಿಗೆ ಕುಡಿಯುವ ನೀರು ಪೂರೈಸುವ ಬುಗಡನಹಳ್ಳಿ ಜಲಸಂಗ್ರಹಗಾರದಲ್ಲಿ 260 ಎಂಸಿಎ್ಟಿ ಹೇಮೆ ನೀರು ಸಂಗ್ರಹವಿದ್ದರು ಕಳೆದ 8&10 ದಿನಗಳಿಂದ ಜನ ನೀರಿನ ತತ್ವಾರ ಎದುರಿಸಿದ್ದರು. ಮಳೆಗಾಲದಲ್ಲಿ ಜತೆಗೆ ಹೇಮಾವತಿ ನೀರಿದ್ದರೂ ವರಮಹಾಲಕ್ಷಿ$್ಮ ಹಬ್ಬದ ಸಂದರ್ಭದಲ್ಲೇ ನೀರು ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ಜನರು ಟ್ಯಾಂಕರ್ ಮೊರೆ ಹೋಗುವಂತಾಗಿತ್ತು. ಆದರೆ, ಈ ವೇಳೆ ಪರ್ಯಾಯ ವ್ಯವಸ್ಥೆ ಕಡೆ ಒತ್ತು ಕೊಟ್ಟಿರಲಿಲ್ಲ.
ಕೈ ಕೊಟ್ಟ ಮೋಟಾರ್ : ಬುಗಡನಹಳ್ಳಿ ಜಲಸಂಗ್ರಹಗಾರದ ಜಾಕ್ವೆಲ್ನಿಂದ ಪಿಎನ್ಆರ್ ಪಾಳ್ಯದ ಶುದ್ಧ ಕುಡಿಯುವ ನೀರು ಟಕಕ್ಕೆ ನೀರು ಪಂಪ್ ಮಾಡುವ ಎರಡು ಬೃಹತ್ ಮೋಟಾರ್ಗಳು ತಾಂತ್ರಿಕ ಸಮಸ್ಯೆಯಿಂದ ಕಳೆದ ಸೋಮವಾರವೇ ಸ್ಥಗಿತಗೊಂಡಿದ್ದವು. ಮೋಟಾರ್ಗಳು ಕೆಟ್ಟು ನಿಂತ ಪರಿಣಾಮ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಸ್ಟಾ$ಂಡ್ ಬೈ ಮೋಟಾರ್ ಸಹ ರಿಪೇರಿಗೆ ಕಳುಹಿಸಿದ್ದ ಸಂದರ್ಭದಲ್ಲೇ ಎರಡು ಮೋಟಾರ್ಗಳು ಕೈಕೊಟ್ಟಿದ್ದವು. ಹಾಗಾಗಿ, ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.
ಕೊನೆಗೂ ಸೋಮವಾರ ಸಂಜೆ ಹೊತ್ತಿಗೆ ಮೋಟಾರ್ ಅನ್ನು ರಿಪೇರಿ ಮಾಡಿಸಿದ್ದು ಸದ್ಯಕ್ಕೆ ಸಮಸ್ಯೆ ಬಗೆಹರಿದಂತಾಗಿದೆ. ಪಿಎನ್ಆರ್ ಪಾಳ್ಯದ ಶುದ್ಧ ನೀರು ಟಕಕ್ಕೆ ಜಾಕ್ ವೆಲ್ನಿಂದ ನೀರು ಪಂಪ್ ಮಾಡುವ ಟ್ರಯಲ್ ಸಂಜೆ ಹೊತ್ತಿಗೆ ಆರಂಭವಾಗಿದ್ದ ಇನ್ನೊಂದು ಮೋಟಾರ್ ಅನ್ನು ಬುಧವಾರ ಅಳವಡಿಸಿ ನೀರಿನ ಸಮಸ್ಯೆ ಬಗೆಹರಿಸಲು ಪಾಲಿಕೆ ಸಿಬ್ಬಂದಿ ಸಮರೋಪಾದಿಯಲ್ಲಿ ಶ್ರಮಿಸುತ್ತಿದ್ದಾರೆ.
631 ಕೊಳವೆಬಾವಿಗಳು ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್ಗಳಲ್ಲಿ 3 ಲಕ್ಷ ಜನಸಂಖ್ಯೆಯಿದ್ದು ಪ್ರತಿನಿತ್ಯ 57 ಎಂಎಲ್ಡಿ ಕುಡಿಯುವ ನೀರಿನ ಅಗತ್ಯವಿದೆ. ಬುಗಡಹನಹಳ್ಳಿ ಜಲಸಂಗ್ರಹಾಗಾರದಲ್ಲಿ 260 ಎಂಸಿಎ್ಟಿ ನೀರಿದೆ. ಹೆಬ್ಬಾಕ ಕೆರೆಯಲ್ಲು ಸದ್ಯ 25 ಎಂಸಿಎ್ಟಿ ನೀರಿದೆ. ಇನ್ನು ಉತ್ತಮ ಮಳೆಯಿಂದಾಗಿ ಪಾಲಿಕೆ ವ್ಯಾಪ್ತಿಯ 631 ಕೊಳವೆಬಾವಿಗಳಲ್ಲು ನೀರಿದ್ದು ಅವುಗಳಿಂದ ನೀರು ಪೂರೈಸಲಾಗುತ್ತಿದೆ. ಜಾಕವೆಲ್ನ ಎರಡು ಮೋಟಾರ್ ದುರಸ್ತಿಗೊಂಡರೆ 3&4 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ.
ಮಳೆ ಜತೆಗೆ ಬುಗಡನಹಳ್ಳಿ ಕೆರೆಯಲ್ಲಿ ಹೇಮಾವತಿ ನೀರಿದ್ದರೂ ಕಳೆದ 8-10 ದಿನಗಳಿಂದ ನೀರು ಪೂರೈಕೆ ಇಲ್ಲದೆ ತೀವ್ರ ತೊಂದರೆ ಆಗಿದೆ. ಅನಿವಾರ್ಯವಾಗಿ ಟ್ಯಾಂಕರ್ ಮೊರೆ ಹೋಗಬೇಕಿದೆ. ಮೋಟಾರ್ ಕೆಟ್ಟು ಹೋಗಿದೆ ಅಂತ ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದು ಪರ್ಯಾಯ ವ್ಯವಸ್ಥೆ ಮಾಡದೇ ಇರುವುದು ವಿಪರ್ಯಾಸ. ಕೊಳವೆಬಾವಿಗಳಿಂದಾದರು ಮನೆಗಳಿಗೆ ನೀರು ಪೂರೈಸಲು ಕ್ರಮವಹಿಸಬೇಕಿತ್ತು. ಮುರಳಿಕೃಷ್ಣಪ್ಪ ಎಸ್ಐಟಿ ಬಡಾವಣೆ ನಿವಾಸಿ ಬುಗಡನಹಳ್ಳಿ ಜಲಂಗ್ರಹಾಗಾರದ ಜಾಕ್ವೆಲ್ನ ಎರಡು ಮೋಟಾರ್ಗಳು ಕೆಟ್ಟು ಹೋಗಿದ್ದರಿಂದ ಹೇಮವಾತಿ ನೀರಿದ್ದರೂ ಜನರಿಗೆ ನೀರು ಪೂರೈಕೆ ಮಾಡಲಾಗಿಲ್ಲ. ಹೊಸ ಮೋಟಾರ್ ಖರೀದಿಗೆ ಟೆಂಡರ್ ಕರೆಯಲಾಗಿದೆ. ಹಳೇ ಮೋಟಾರ್ಗಳನ್ನು ದುರಸ್ತಿ ಮಾಡಿ ಅಳವಡಿಸಲಾಗುತ್ತಿದ್ದು ಮಂಗಳವಾರದೊಳಗೆ ಈ ಸಮಸ್ಯೆ ಬಗೆಹರಿಯಲಿದೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ