ಜಲಜೀವನ ಮಿಷನ್​ ಯೋಜನೆ ಸದ್ಬಳಕೆಯಾಗಲಿ

19blh1 zp ceo news
Published on

ಬೈಲಹೊಂಗಲ: ತಾಲೂಕಿನ ನೇಸರಗಿ, ಮಲ್ಲಾಪುರ ಕೆ.ಎನ್​. ಹಾಗೂ ವಣ್ಣೂರ ಸೇರಿ ವಿವಿಧ ಗ್ರಾಮಗಳಿಗೆ ಜಿಪಂ ಸಿಇಒ ರಾಹುಲ ಶಿಂಧೆ ಶನಿವಾರ ಭೇಟಿ ನೀಡಿ ಜಲಜೀವನ ಮಿಷನ್​ ಯೋಜನೆ ಕಾಮಗಾರಿ ವೀಸಿದರು.

ಪ್ರಗತಿ ಹಂತದಲ್ಲಿರುವ ಕಾಮಗಾರಿ ವೀಸಿ ಪ್ರತಿ ಮನೆ, ಮನೆಯ ನಲ್ಲಿಗಳಲ್ಲಿ ನೀರು ಬರುವುದನ್ನು ಪರೀಸಿದರು. ನೀರು ಬರುವುದರ ಬಗ್ಗೆ ಸ್ಥಳಿಯ ಮಹಿಳೆಯರಿಂದ ಮಾಹಿತಿ ಪಡೆದು ಯೋಜನೆ ಸದ್ಬಳಕೆಯಾಗಲಿ ಎಂದು ಮನವಿ ಮಾಡಿದರು.

ಗ್ರಾಮದ ಐಟಿಐ ಕಾಲೇಜಿಗೆ ಭೇಟಿ ನೀಡಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಕಾಮಗಾರಿ ವೀಸಿದರು. ಸಂಜೀವಿನಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಗೆ ಭೇಟಿ ನೀಡಿ ಒಕ್ಕೂಟದಿಂದ ಗ್ರಾಮೀಣ ಮಹಿಳೆಯರು ಹಾಗೂ ರೈತಾಪಿ ಕುಟುಂಬಗಳ ಬೆಳವಣಿಗೆಗೆ ಸಹಕರಿಸಬೇಕೆಂದು ಮಹಿಳಾ ಒಕ್ಕೂಟದ ಪ್ರತಿನಿಧಿಗಳಿಗೆ ಸೂಚಿಸಿದರು.

ತಾಪಂ ಇಒ ಸಂಜೀವ ಜುನ್ನೂರ, ಕಾರ್ಯನಿರ್ವಾಹಕ ಅಭಿಯಂತ ಕಿರಣ ೂರ್ಪಡೆ, ಮಹೇಶ ಹೂಲಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net